ತಾಲೂಕಿನ ಟ್ಯಾಕ್ಸಿ ಚಾಲಕ, ಮಾಲಿಕರಿಂದ ಶಾಸಕ ಖಾಡೆಗೆ ಸನ್ಮಾನ
ಕಾಗವಾಡ 13: ಮಹಾರಾಷ್ಟ್ರದ ಮಿರಜ್ ಶಾಸಕ ಸುರೇಶಬಾಹು ಖಾಡೆ ಅವರನ್ನು ಕಾಗವಾಡ ಹಾಗೂ ಅಥಣಿ ತಾಲೂಕಿನ ಟ್ಯಾಕ್ಸಿ ಚಾಲಕ ಹಾಗೂ ಮಾಲಿಕರು ಮಿರಜದಲ್ಲಿ ಶುಕ್ರವಾರದಂದು ಖಾಡೆ ಅವರ ಕಚೇರಿಗೆ ತೆರಳಿ ಸನ್ಮಾನಿಸಿದರು.
ಮಹಾರಾಷ್ಟ್ರ ಮಿರಜ ಹಾಗೂ ಸಾಂಗಲಿ ಪಟ್ಟಣಗಳಿಗೆ ನೆರೆಯ ಕರ್ನಾಟಕ ಫಾಸಿಂಗ್ ಹೊಂದಿದ ವಾಹನಗಳನ್ನು ತಡೆದು ಕಿರುಕುಳ ಕೊಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇನ್ನು ಮುಂದೆ ಮಹಾರಾಷ್ಟ್ರದ ಪೊಲೀಸರು ವಾಹನಗಳನ್ನು ತಡೆದು ಕಿರುಕುಳ ನೀಡಿದರೆ ಅಂಥವರ ಮೇಲೆ ಕ್ರಮ ಜರುಗಿಸುವುದಾಗಿ ಹೇಳಿದರು.
ವಾಹನ ಚಾಲಕರು ಮತ್ತು ಮಾಲಿಕರು ತಾವು ಮಹಾರಾಷ್ಟ್ರಕ್ಕೆ ಬರುವಾಗ ಅಗತ್ಯವಿರುವ ದಾಖಲಾತಿಗಳನ್ನು ತೆಗೆದುಕೊಂಡು ಬರಬೇಕು. ಕಾಗದ ಪತ್ರಗಳು ಸರಿಯಾಗಿದ್ದರೂ ಸಹ ಪೊಲೀಸರು ವಾಹನಗಳನ್ನು ತಡೆದು ಅನಾವಶ್ಯಕವಾಗಿ ಹಣ ವಸೂಲಾತಿ ಮಾಡಿದರೆ ಅಂಥರ ಮೇಲೆ ನಿರ್ದಕ್ಷಿಣ್ಯ ಕ್ರಮ ಜರುಗಿಸಲಾಗುವುದೆಂದು ತಿಳಿಸಿದರು.
ಅಥಣಿ ಟ್ಯಾಕ್ಸಿ ಮಾಲಿಕರ ಸಂಘದ ಅಧ್ಯಕ್ಷ ಕೇದಾರಿ ಮುಚ್ಚಂಡಿ ಇವರು ಶಾಸಕ ಸುರೇಶಬಾಹು ಖಾಡೆ ಹಾಗೂ ವಿನಾಯಕ ಬಾಗಡಿಯವರನ್ನು ಸನ್ಮಾನಿಸಿ ಮಾತನಾಡುತ್ತಾ ಕಳೆದ ಹಲವು ವರ್ಷಗಳಿಂದ ಮಿರಜ್ ಹಾಗೂ ಸಾಂಗ್ಲಿ ಪೊಲೀಸರು ಕಿರುಕುಳ ನೀಡುತ್ತಿದ್ದರು, ಶಾಸಕರ ಹೇಳಿಕೆಯಿಂದ ಕರ್ನಾಟಕದ ವಾಹನ ಸವಾರರಿಗೆ ಈಗ ನಿಟ್ಟುಸಿರು ಬಿಟ್ಟಂತಾಗಿದೆ, ಅದಕ್ಕಾಗಿ ನಾವು ಖುದ್ದಾಗಿ ಹೋಗಿ ಅವರನ್ನು ಸನ್ಮಾನಿಸಿದಾಗಿ ಹೇಳಿದರು.
ಮುಖಂಡರಾದ ವಿನಾಯಕ ಬಾಗಡಿ, ಕೃಷ್ಣಾ ಶಿಂಧೆ, ಜಗದೀಶ ಕೊಪ್ಪದ, ರ್ಶರೀಶೈಲ ಬಂಗಿ, ಶಿದ್ಲಿಂಗಪ್ಪ ಲಕ್ಕೆಗೌಡರ, ಭರಮು ಮಾಳಿ, ದೀಪಕ ಸೌದಾಗರ, ಶೇಖರ ಮುಚ್ಚಂಡಿ, ಶೇಖರ ಮುಚ್ಚಂಡಿ, ಮಲ್ಲಿಕಾರ್ಜುನ ಬಡಕಂಬಿ, ರಾಜು ರಜಪುತ, ಸಂತೋಷ ಮಾಳಿ, ಮುತ್ತು ಗಸ್ತಿ ಸೇರಿದಂತೆ ಅನೇಕರು ಇದ್ದರು,