ಚಿನ್ನದ ಪದಕ ಪಡೆದ ಬಾನುಗೆ ಸನ್ಮಾನ
ಗುಳೇದಗುಡ್ಡ 16: ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 2019-20ನೇ ಸಾಲಿನ ಬಿಎ ಪದವಿಯಲ್ಲಿ ರಾಜ್ಯಕ್ಕೆ 10 ನೇ ರಾ್ಯಂಕ್ ಹಾಗೂ ಕನ್ನಡ ಐಚ್ಚಿಕ ವಿಷಯದಲ್ಲಿ ಚಿನ್ನದ ಪದಕ ಪಡೆದ ಪಟ್ಟಣದ ಕುಮಾರಿ ಬಾನು ಬಾಗವಾನ ಅವರಿಗೆ ಪುರಸಭೆ ಮಾಜಿ ಸದಸ್ಯರು ಹಾಗೂ ಗುಳೇದಗುಡ್ಡ ಇಸ್ಲಾಮ್ ತಂಜುಮನ್ ಕಮೀಟಿ ಮಾಜಿ ಅಧ್ಯಕ್ಷ ಎಂ.ಎಂ.ಜಮಖಾನಿ ಸನ್ಮಾನಿಸಿ ಗೌರಿವಿಸಿದರು.
ಪಟ್ಟಣದ ಅವರ ನಿವಾಸದಲ್ಲಿ ಎಂ.ಎಂ.ಜಮಖಾನಿ ಅವರು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ರಾ್ಯಂಕ್ ಪಡೆದ ಕುಮಾರಿ ಬಾನು ಬಾಗವಾನ ಹಾಗೂ ವಿದ್ಯಾರ್ಥಿನಿಯ ತಂದೆ ತಾಯಿಗಳಾದ ಹುಸೇನ್ಸಾಬ್ ದೊಡ್ಡಅಮೀನ್ಸಾಬ್ ಬಾಗವಾನ, ಶ್ರೀಮತಿ ಅಮೀನಮಾ ಅವರಿಗೆ ಶಾಲು ಹೊದಿಸಿ ಫಲ ಪುಷ್ಪ ನೀಡಿ ಸನ್ಮಾನಿಸಿದರು.
ನಂತರ ಎಂ.ಎಂ.ಜಮಖಾನಿ ಅವರು ಮಾತನಾಡಿ, ಕುಮಾರಿ ಬಾನು ಬಾಗವಾನ ಅವರು ಮಹಿಳಾ ವಿಶ್ವವಿದ್ಯಾಲಯದಿಂದ ಬಿಎ ಪದವಿಯಲ್ಲಿ 10 ನೇ ರಾ್ಯಂಕ್ ಹಾಗೂ ಕನ್ನಡ ಐಚ್ಚಿಕ ವಿಷಯದಲ್ಲಿ ಚಿನ್ನದ ಪದಕ ಪಡೆದು ಸಮಾಜದ ಕೀರ್ತಿ ಹೆಚ್ಚಿಸಿದ್ದಾರೆ. ಶಿಕ್ಷಣದಿಂದ ಮಾತ್ರ ಆದರ್ಶ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಹಾಗಾಗಿ ಸಮಾಜದಲ್ಲಿ ಮಕ್ಕಳಿಗೆ ಮೊದಲು ಶಿಕ್ಷಣ ನೀಡಬೇಕು. ಕುಮಾರಿ ಬಾನು ಬಾಗವಾನ ಅವರು ಸಮಾಜದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಮಾಜದ ಮಕ್ಕಳು ನಡೆದು ಸಮಾಜದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಬೇಕೆಂದು ಮನವಿ ಮಾಡಿದರು.
ಜಮಾತ್ ಅಧ್ಯಕ್ಷ ಇಬ್ರಾಹಿಂ ಬಾಗವಾನ, ಉಪಾಧ್ಯಕ್ಷ ಲಾಲಸಾಬ್ ಮಜ್ಜಗಿ, ಕಾರ್ಯದರ್ಶಿ ಶಬ್ಬಿರ ಬಾಗವಾನ, ಸಮಾಜದ ಹಿರಿಯರಾದ ಖಾಜೆಸಾಬ್ ಸಂದಿಮನಿ, ಬುಡ್ಡೆಸಾಬ್ ಸಂದಿಮನಿ, ಹುಸೆನ್ಸಾಬ್ ಮಜ್ಜಗಿ, ಮೆಹಬೂಬ್ ಬಾಗವಾನ, ಲಾಲಸಾಬ್ ಅತ್ತಾರ, ಸೈಯದ್ಬಾಷಾ ಮಕಾನದಾರ, ಅಮೀರ ಮುದ್ದೇಬಿಹಾಳ ಸೇರಿದಂತೆ ಇತರರು ಇದ್ದರು.