ಮಹಾಪೌರರಾದ ರಾಮಣ್ಣ ಬಡಿಗೇರಗೆ ಸನ್ಮಾನ
ಹುಬ್ಬಳ್ಳಿ 13: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ರಾಮಣ್ಣ ಬಡಿಗೇರ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯವತಿಯಿಂದ ಶಾಲು, ಮಾಲಾರ್ಪಣೆ ಮಾಡಿ, ಗ್ರಂಥ ನೀಡಿ ಪ್ರೀತಿ, ಆತ್ಮೀಯತೆಯಿಂದ ಹೃದಯಪೂರ್ವಕವಾಗಿ ಗೌರವಿಸಲಾಯಿತು. ಅಭಿನಂದನೆಗಳನ್ನು ಸಲ್ಲಿಸಿದರು.
ಮಹಾನಗರರಾಮಣ್ಣ ಬಡಿಗೇರಅವರಅವಧಿಯಲ್ಲಿ ಸರ್ವತೋಮುಖಅಭಿವೃದ್ದಿ ಆಗಲಿ ಎಂದು ಶುಭಕೋರಿದರು.ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕಜ್ಞಾನ ವಿಜ್ಞಾನ ಸಮಿತಿಯಜಿಲ್ಲಾಘಟಕದಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನಜಿಲ್ಲಾಘಟಕದಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕಡಾ. ಸುರೇಶ ಡಿ. ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯಅಧ್ಯಕ್ಷ, ಸಾಹಿತಿ ಪ್ರೊ ಎಸ್.ಎಂ.ಸಾತ್ಮಾರ, ದೇವಾನಂದ ಹುರಕಡ್ಲಿ, ಎಂ.ಕೆ.ಬೆಳಗಲಿ, ಕಲ್ಲಪ್ಪ ಗುಂಜಾಳ, ಡಾ.ಪ್ರಕಾಶ ಮುನ್ನೋಳಿ, ಈಶ್ವರ ಬಸಾಪುರ, ಭರತ ಬದ್ದಿ, ಸಾಹಿತಿ ಪ್ರಶಾಂತಆಡೂರ, ದಲಬಂಜನ, ಮುಂತಾದವರುಇದ್ದರು.