ಗೀತಾ ಭಾಸ್ಕರ್ ಕುಂದಾಪುರವರಿಗೆ ಸನ್ಮಾನ
ರಾಣೆಬೆನ್ನೂರು 13: ಸ್ಪರ್ಧಾತ್ಮಕ ಹಾಗೂ ವೈಜ್ಞಾನಿಕ ಯುಗದಲ್ಲಿ ಇಂದು ಸರ್ಕಾರಿ ಉದ್ಯೋಗ ಹೊಂದುವುದು ಬಹಳಷ್ಟು ಕಷ್ಟಕರ ಕೆಲಸವಾಗಿದೆ ಎಂದು ಬಿಸಿಎಂ ನಿವೃತ್ತ ಕಲ್ಯಾಣಾಧಿಕಾರಿ ಗೀತಾ ಭಾಸ್ಕರ್ ಕುಂದಾಪುರ ಹೇಳಿದರು. ಶನಿವಾರದಂದು ಸ್ಥಳೀಯ ಮಹಿಷಾಸುರ ಮರ್ದಿನಿ ಕೊ.ಆಪ್ ಕ್ರೆಡಿಟ್ ಸೊಸೈಟಿ ಹಾಗೂ ಅಭಿಮಾನಿಗಳು ನಿವೃತ್ತಿಯ ನಿಮಿತ್ತ ಏರಿ್ಡಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಅಕಸ್ಮಾತ್ ಸರಕಾರಿ ಕೆಲಸ ದೊರೆತರೂ ಸಹ ಅದನ್ನು ಪ್ರಾಮಾಣಿಕವಾಗಿ ನಿಭಾಯಿಸಲು ಬಹಳಷ್ಟು ಸವಾಲುಗಳನ್ನು ಎದುರಿಸಿ ಕೆಲಸ ಮಾಡುವ ಪರಿಸ್ಥಿತಿ ಬರುತ್ತದೆ ಎಂದರು.
ಸೊಸೈಟಿ ಅಧ್ಯಕ್ಷೆ ಶಶಿಕಲಾ ಸದಾನಂದ ಕುಂದಾಪುರ, ಸ್ವಾಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ಪತ್ರಕರ್ತ ಎಂ.ಚಿರಂಜೀವಿ, ಚಿಕ್ಕಣ್ಣ ಕುಂದಾಪುರ, ರಾಜು ಹೊನ್ನಾಳಿ, ಭಾಸ್ಕರ್ ಅಮೀನ್, ರವೀಂದ್ರ ಮಡಿವಾಳರ, ಶಿವಕುಮಾರ್ ಜಾಧವ್, ಪ್ರಕಾಶ್ ಕುಂದಾಪುರ, ಕಿಶನ್ ಸೇರಿದಂತೆ ಸೊಸೈಟಿಯ ನಿರ್ದೇಶಕರುಗಳು, ಸಿಬ್ಬಂದಿಗಳು, ಮತ್ತಿತರರು ಇದ್ದರು.