ಫೆ. 8ರಿಂದ ವಾಲ್ಮೀಕಿ ಜಾತ್ರಾ ಮಹೋತ್ಸವ
ಲೋಕದರ್ಶನ ವರದಿ
ಯರಗಟ್ಟಿ: ವಾಲ್ಮೀಕಿ ಸಮಾಜದವರಿಗೆ 3 ರಿಂದ 7 ರರವಗೆ ಮೀಸಲಾತಿ ಹೆಚ್ಚಿಸಿದ್ದು ಇಗಿನ ಮುಖ್ಯ ಮಂತ್ರಿ ಹಾಗೂ ಮಾಜಿ ಮುಖ್ಯ ಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೆನೆ ನಾಯಕ ಸಮಾಜಕ್ಕೆ ಜನ ಸಂಖ್ಯೆ ಆಧಾರದ ಮೇಲೆ ಮಿಸಲಾತಿ ಹೆಚ್ಚಿಸಲು 40 ವರ್ಷಗಳ ಸತತ ಹೋರಾಟದ ಫಲವಾಗಿ ಪ್ರತಿಶತ 7 ರರವರಗೆ ಮಿಸಲಾತಿ ಹೆಚ್ಚಿಸುವುದು. ಅನಿವಾರ್ಯವಾಗಿ ಹೆಚ್ಚಿಸಿದ್ದಾರೆ ಯಾವ ರಾಜಕಿಯ ನಾಯಕರು ಕೊಡಾ ಎಸ್.ಟಿ ಮಿಸಲಾತಿಗೆ ಹೋರಾಟ ಮಾಡಿಲ್ಲ ಇಗ ಮಿಸಲಾತಿ ಘೋಷನೆ ಆದ ನಂತರ ಬಳ್ಳಾರಿಯಲ್ಲಿ ಬೆರೆ ಬೆರೆ ರಾಜಕಿಯ ನಾಯಕರು ತಮ್ಮ ಹೆಸರು ಬಳಸಿಕೊಂಡು ಮತಗಳ ಆಶೆಗಾಗಿ ತಮ್ಮ ಹೋರಾಟ ಎಂದುಕೊಳ್ಳುತ್ತಿದ್ದಾರೆ ಎಂದು ರಾಜನಹಳ್ಳಿ ಶ್ರೀಮಹರ್ಷಿ ವಾಲ್ಮೀಕಿ ಗುರುಪಿಠದ ಪ್ರಶಣ್ಣಾನಂದ ಸ್ವಾಮಿಜಿ ಹೇಳಿದರು.
ಯರಗಟ್ಟಿ ಸಮೀಪದ ಸೊಪ್ಪಡ್ಲ ಗ್ರಾಮದ ಲಕ್ಷ್ಮೀ ದೇವಿಯ ದೇವಸ್ಥಾನದ ಆವರಣದಲ್ಲಿ ರವಿವಾರ ದಿ.20 ರಂದು ಗುರುವಂದನಾ ಮತ್ತು 2024 ರಲ್ಲಿ ಪೆಬ್ರುವರಿಯಲ್ಲಿ ನಡೆಯುವ 4ನೇ ವರ್ಷದ ಶ್ರೀಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಯರಗಟ್ಟಿ ತಾಲೂಕಾ ಜಾತ್ರಾ ಕಮಿಟಿ ಅಧ್ಯಕ್ಷ ಎಸ್ ಎಚ್ ನಾಯ್ಕರ ಮಾತನಾಡಿ ನಾಯಕ ಸಮಾಜಕ್ಕೆ ಮಿಸಲಾತಿ ಹೆಚ್ಚಿಸುವಲ್ಲಿ ಹಗಲಿರುಳು ತಮ್ಮ ಜೀವದ ಹಂಗು ತೊರೆದು ಹೋರಾಟ ಮಾಡಿ ಯಶಸ್ವಿಗೊಳಿಸಿದ ಪ್ರಶಣ್ಣಾಂದ ಸ್ವಾಮಿಜಿಯವರ ಪಾತ್ರ ಮಹತ್ವದ್ದಾಗಿದೆ ಹಲವಾರು ವರ್ಷಗಳಿಂದ ತಂಬದೆಯಿರುವ ಬ್ಯಾಕಲಾಕ್ ಹುದ್ದೆಗಳನ್ನು ಮುಂದಿನ ದಿನಗಳಲ್ಲಿ ಹುದ್ದೆಗಳನ್ನು ಪ್ರತಿವರ್ಷ ಪ್ರತಿ ಸರಕಾರಗಳು ಭರ್ತೆ ಮಾಡಿಕೊಳ್ಳುವುದರ ಮೂಲಕ ಹಿಂದುಳಿದ ಜಾತಿಯವರಿಗೆ ಮತ್ತಷ್ಟು ಉದ್ಯೋಗ ಸೃಷ್ಠಿ ಯಾಗುತ್ತದೆ ತಿಳಿಸಿದರು.
ಬಾಬಾಣ್ಣ ತಳವಾರ, ವಿಠ್ಠಲ ಹಲಗಲಿ, ಮಾರುತಿ ಗೊರಗುದ್ದಿ, ಸಿದ್ದಾರೋಢ ಮಾದನ್ನವರ, ರಾಮಚಂದ್ರ ತಳವಾರ, ಫಕ್ಕೀರಪ್ಪ ತಳವಾರ, ಸಿದ್ದಪ್ಪ ಮಾಳಗಿ, ಹೇಮಂತ ಗೋಪಾಳಿ, ಎಲ್ ಎನ್ ನಾಯ್ಕ, ಮಹಾಂತೇಶ ತಳವಾರ, ಸತೀಶ ಕುರಬಗಟ್ಟಿ, ರಾಮಚಂದ್ರಗೌಡ ಪಾಟೀಲ, ಅಶೋಕ ನಾಯ್ಕರ, ಬಾಳೇಶ ತಳವಾರ, ಮಹಾದೇವ ದುರ್ಗನ್ನವರ, ಸೋಮನಗೌಡ ಪಾಟೀಲ ಮುಂತಾದವರು ಇದ್ದರು