ಕಾಗವಾಡ

ರೈತರು ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಒಂದಾಗಿ: ರಾಜು ಶೆಟ್ಟಿ

ರೈತರು ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಒಂದಾಗಿ: ರಾಜು ಶೆಟ್ಟಿ


ರೈತರು ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಒಂದಾಗಿ: ರಾಜು ಶೆಟ್ಟಿ 


ಕಾಗವಾಡ 23: ಸರ್ಕಾರಗಳು ರೈತರನ್ನು ಲೂಟಿ ಮಾಡುತ್ತಿರುವ ಸಕ್ಕರೆ ಕಾರ್ಖಾನೆಗಳ ಪರವಾಗಿರುವುದು ವಿಪರ್ಯಾಸವಾಗಿದ್ದು, ರೈತರು ಬೆಳೆದ ಕಬ್ಬಿಗೆ ಯೋಗ್ಯ ಬೆಲೆ ನೀಡದೇ ಮೋಸ ಮಾಡುತ್ತಿದ್ದರೂ ಸಹ ಸರ್ಕಾರ ಕಣ್ಮುಚ್ಚಿ ಕುಳಿತು ಕೊಂಡಿವೆಯೆಂದು ಸ್ವಾಭಿಮಾನಿ ರೈತ ಸಂಘಟನೆಯ ಸಂಸ್ಥಾಪಕ ರಾಜು ಶೆಟ್ಟಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 


ಅವರು, ಮಂಗಳವಾರ ದಿ. 22 ರಂದು ಕಾಗವಾಡ ಪಟ್ಟಣ ಪಂಚಾಯತ ಆವರಣದಲ್ಲಿ ಹಮ್ಮಿಕೊಂಡಿದ್ದ ಕಬ್ಬು ಬೆಳೆಗಾಗರ ರೈತರ ಬೃಹತ್ ಸಮಾವೇಶದಲ್ಲಿ ಮಾತನಾಡುತ್ತಿದ್ದರು. ಬಹುತೇಕ ಸಕ್ಕರೆ ಕಾರ್ಖಾನೆಗಳ ಮಾಲೀಕರು, ಯಾವುದಾದರೊಂದು ರಾಜಕೀಯ ಪಕ್ಷದ ಸಂಸದರು ಅಥವಾ ಶಾಸಕರಾಗಿರುವುದರಿಂದ ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರಗಳಾಗಲಿ ಕಾರ್ಖಾನೆಗಳ ಲಾಭಿಗೆ ಒಳಗಾಗಿ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತ ರೈತರನ್ನು ಬಲಿ ಕೊಡುತ್ತಿವೆ. ರೈತರನ್ನು ಜಾತಿ ರಾಜಕೀಯದ ಮೂಲಕ ಒಡೆದು ಆಳುವ ನೀತಿಯನ್ನು ಕಾರ್ಖಾನೆಗಳು ಮಾಡುತ್ತಿದ್ದು, ರೈತರು ಒಕ್ಕಟ್ಟಾಗಿ ಹೋರಾಟ ಮಾಡಿದರೇ ಕಾರ್ಖಾನೆಗಳ ಮಾಲೀಕರಿಗೆ ಬುದ್ಧಿ ಕಲಿಸಬಹುದಾಗಿದೆ ಎಂದರು. 

 

ಇದಕ್ಕೂ ಮೊದಲು ಕಬ್ಬು ಬೆಳೆಗಾರ ರೈತರು, ಕಾಗವಾಡದಿಂದ ಶಿರಗುಪ್ಪಿ ಮುಖಾಂತರ ಯಡ್ರಾಂವ, ಉಗಾರ, ಕೆಂಪವಾಡ ಮತ್ತು ಕಾಗವಾಡ ಸಕ್ಕರೆ ಕಾರ್ಖಾನೆಗಳಿಗೆ ಬೈಕ್ ರಾ​‍್ಯಲಿ ಮುಖಾಂತರ ತೆರಳಿ ಕಬ್ಬಿನ ಬೆಲೆ ಪ್ರಕಟಿಸುವ ಕುರಿತು ಮನವಿ ಸಲ್ಲಿಸಿದರು. 


ಸಂಜೆ ನಡೆದ ರೈತ ಸಮಾವೇಶದಲ್ಲಿ ಸ್ವಾಭಿಮಾನಿ ರೈತ ಸಂಘಟನೆಯ ರಾಜೇಂದ್ರ ಗಡೆನ್ನವರ, ಸಂತೋಶ ಪಾಟೀಲ (ಶಿರಟಿ), ಪ್ರಕಾಶ ಪಾಟೀಲ, ಮಹಾವೀರ ಕರವ, ಅಜೀತ ಕರವ, ಎಂ.ಬಿ. ಉದಗಾಂವೆ ಮುಂತಾದವರು ಮಾತನಾಡಿದರು.  


ಅಣ್ಣಾಸಾಬ ಕಠಾರೆ, ಮಹಾದೇವ ಉದಗಾಂವೆ, ಕಾಕಾ ಪಾಟೀಲ, ರಾಜು ಕರವ, ಅಭಯ ಕರೋಲೆ, ಅಮರ ಶಿಂಧೆ, ರಾಜು ಚಿಂಚವಾಡೆ, ಅಕ್ಷಯ ಅಕಿವಾಟೆ, ಸಂದೀಪ ಕಾಮಗೌಂಡಾ, ಪ್ರಭಾಕರ ಕುಸನಾಳೆ, ಪ್ರಲ್ಹಾದ ದಿವಟೆ, ಜಗದೀಶ ಕುನಸಾಳೆ, ಭರತ ಅಕಿವಾಟೆ, ಸುನೀಲ ಗುಂಡವಾಡೆ ಸೇರಿದಂತೆ ಕಾಗವಾಡ, ಶಿರಗುಪ್ಪಿ, ಶೇಡಬಾಳ, ಉಗಾರ, ಐನಾಪೂರ ಗ್ರಾಮದ ರೈತರು ಉಪಸ್ಥಿತರಿದ್ದರು. ರಾಜು ಪಾಟೀಲ ಸ್ವಾಗತಿಸಿದರು. ಅಶೋಕ ಪಾಟೀಲ ನಿರೂಪಿಸಿದರು. ಆದಿನಾಥ ಬಿಂದಗೆ ವಂದಿಸಿದರು. 


ಸುದ್ದಿ ಓದಿ