ಯರಗಟ್ಟಿ

ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತ ಸಂಘ ಪ್ರತಿಭಟನೆ

ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತ ಸಂಘ ಪ್ರತಿಭಟನೆ

ಲೋಕದರ್ಶನ ವರದಿ 


ಯರಗಟ್ಟಿ 15: ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾಜ್ಯ ರೈತ ಸಂಘ ಮತ್ತು ರೈತ ಸೇನೆ ಕಾರ್ಯಕರ್ತರು ಪಟ್ಟಣದಲಿ ಪ್ರತಿಭಟನೆ ನಡೆಸಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಸ್ತೆ ತಡೆ ಮಾಡಿದರು. ಸರಕಾರವು ರೈತರ, ಗ್ರಾಹಕರ ವಿರೋಧಿ ವಿದ್ಯುತ್ ತಿದ್ದುಪಡಿ ಮಸೂದೆ ಜಾರಿಗೆ ತರಬಾರದು. ಈ ಹಿಂದೆ ರೈತ ವಿರೋಧಿಕೃಷಿ ಕಾಯ್ದೆಗಳನ್ನು ಕೇಂದ್ರ ಜಾರಿಗೆ ತಂದಿತ್ತು. ಆದರೆ ದೇಹಲಿಯಲ್ಲಿ ನಡೆದ ನಿರಂತರ ಹೋರಾಟದಿಂದ ಸರಕಾರ ಈ ಕಾಯ್ದೆಯನ್ನು ಹಿಂಪಡೆದು ಈಗ ವಿದ್ಯುತ್ ತಿದ್ದುಪಡಿಯನ್ನು ಲೋಕಸಭೆಯಲ್ಲಿ ಸ್ಥಾಯಿ ಸಮಿತಿಗೆ ಒಪ್ಪಿಸಿ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಇದರಿಂದ ಜನಸಾಮಾನ್ಯರಿಗೆ, ಸಣ್ಣ ಗ್ರಾಹಕರಿಗೆ, ರೈತರಿಗೆ ಹೊರೆಯಾಗುತ್ತದೆ. ಇದನ್ನು ವಿರೋಧಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯುತ್ತಿವೆ.  


ಸರಕಾರ ಕೂಡಲೆ ಎಚ್ಚೆತ್ತುಕೊಂಡು ಈ ಕಾಯಿದೆ ಕೈ ಬಿಡಬೇಕು. ಇಲ್ಲವಾದರೆ ಮುಂಬರುವ ದಿನಮಾನದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಅಲ್ಲದೆ ರೈತರಿಗೆ ಬೆಳೆಹಾನಿ ಪರಿಹಾರ ನೀಡಬೇಕು ಮತ್ತು ಕಬ್ಬಿನ ಬೆಲೆ ಟನ್‌ಗೆ 4000ರೂಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.  

ಸುಮಾರು ಒಂದು ಗಂಟೆ ಕಾಲ ರಸ್ತೆ ತಡೆದು ನಂತರ ತಹಶೀಲ್ದಾರ್ ಎಂ. ಎನ್‌. ಮಠದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.  

ರೈತ ಸೇನೆ ಮುಖಂಡ ಸೋಮು ರೈನಾಪುರ, ರೈತ ಸಂಘದ ತಾಲೂಕು ಅಧ್ಯಕ್ಷ ರಂಗಪ್ಪ ಗಂಗರಡ್ಡಿ, ವಿಠಲ ಗಂಗರಡ್ಡಿ, ಯರಾ​‍್ಪ ದಾಸರ, ಬಾಬುಸಾಬ ಜಮಾದಾರ, ಶಂಕರ ಕಳ್ಳಿಗುದ್ದಿ ಸೇರಿದಂತೆ ಇತರರಿದ್ದರು. 


ಸುದ್ದಿ ಓದಿ