ಸಿರುಗುಪ್ಪ

ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ರೈತರ ನೋಂದಣಿ ಪ್ರಕ್ರಿಯೆ ಆರಂಭ

ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ರೈತರ ನೋಂದಣಿ ಪ್ರಕ್ರಿಯೆ ಆರಂಭ

ಸಿರುಗುಪ್ಪ 17: ಭತ್ತ ಮತ್ತು ಜೋಳವನ್ನು ಸರ್ಕಾರ ಬೆಂಬಲ ಬೆಲೆಗೆ ರೈತರಿಂದ ನೇರವಾಗಿ ಖರೀದಿಸಲು 15 ಡಿಸೆಂಬರ್  ರಿಂದ ರೈತರಿಂದ ನೋಂದಣಿ ಪ್ರಕ್ರಿಯೆ ಆರಂಭಿಸಿದೆ ರೈತರು  ಜನವರಿ 1ರವರೆಗೂ ನೋಂದಣಿ ಮಾಡಿಸಬಹುದು ಮಾರ್ಚ್‌ 31ರವರೆಗೂ ಕೃಷಿ ಉತ್ಪನ್ನಗಳ ಭಕ್ತ ಜೋಳವನ್ನು ಖರೀದಿ ಮಾಡಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್ ಬಿ ಪಾಟೀಲ್ ಅವರು ತಿಳಿಸಿದರು.  

ಸರ್ಕಾರದ ಬೆಂಬಲ ಬೆಲೆ ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಲ್ ಗೆ 2040ರೂ, ಗ್ರೇಟ್ ಎ ಭತ್ತಕ್ಕೆ 2060ರೂ. ಹೈಬ್ರಿಡ್ ಬಿಳಿ ಜೋಳಕ್ಕೆ 2970ರೂ , ಮಾಲ್ದಂಡಿ ಬಿಳಿ ಜೋಳಕ್ಕೆ 2990ರೂ, ಬೆಂಬಲ ಬೆಲೆಗಳಾಗಿ ರೈತ ಸಮೂಹ ಕೇಂದ್ರದ ಉಪಯೋಗ ಪಡೆಯಬಹುದು ಎಂದು ಅವರು ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ನೌಶಾದ್ ಅಲಿ ಸೇರಿದಂತೆ ರೈತರು ಸಿಬ್ಬಂದಿ ವರ್ಗದವರಿದ್ದರು. 

ಸಿರಿಗೇರಿ: ಪಶುವೈದ್ಯ ಸಂಗೋಪನ ಕೇಂದ್ರ ಆಸ್ಪತ್ರೆ ಕಟ್ಟಡದ ಸಂಪೂರ್ಣ ಛಾವಣಿ ಬೀಳುವ ಅಪಾಯಸಿರುಗುಪ್ಪ 17: ತಾಲೂಕು ಸಿರಿಗೇರಿ ಗ್ರಾಮದ ಸರ್ಕಾರಿ ಪಶುವೈದ್ಯ ಚಿಕಿತ್ಸಾಲಯ ಕಟ್ಟಡದ ಛಾವಣಿ ಸಂಪೂರ್ಣ ಶಿಥಿಲಗೊಂಡು ಬೀಳುವ ಅಪಾಯದಲ್ಲಿದೆ  ಪಶು ವೈದ್ಯರು ಸಿಬ್ಬಂದಿ ಹಾಗೂ ಪಶು ಚಿಕಿತ್ಸೆಗೆ ಆಗಮಿಸುವ ರೈತರು ಭಯದಲ್ಲೇ ಕಚೇರಿಗೆ ಹೋಗಿ ಬರುವ ಅನಿವಾರ್ಯ ನಿರ್ಮಾಣವಾಗಿದೆ. ಪಶು ಚಿಕಿತ್ಸಾ ಕೇಂದ್ರದ ಛಾವಣಿ ಬೀಳುವ ಅಪಾಯ ಹಂತಕ್ಕೆ ತಲುಪಿದೆ. ಆರ್ ಸಿ ಸಿ ಕಾಂಕ್ರೀಟ್ ಉದುರಿ ಬೀಳುತ್ತಿದೆ ಕಬ್ಬಿಣ ರಾಡುಗಳು ಕತ್ತರಿಸಿಕೊಂಡು ಕೆಲ ರಾಡ್ ಗಳು ಕಟ್ಟಾಗಿ ವಿದ್ಯುತ್ ಸಂಪರ್ಕದಿಂದ ಪೈಪ್ ಲೈನ್  ಕಳಚಿಕೊಂಡಿದೆ. ಪಶು ವೈದ್ಯ ಕೇಂದ್ರ ಕಚೇರಿ ಕೊಠಡಿ ಓಷಧ ದಾಸ್ತಾನು ಕೊಠಡಿ ಓಷಧ ಮಿಶ್ರಣ ಕೊಠಡಿ ಒಟ್ಟು 3 ಕೊಠಡಿಗಳಿವೆ. ಇವುಗಳಲ್ಲಿ ಮುಖ್ಯವಾಗಿ ಚಿಕಿತ್ಸಾ ಮೇಲ್ವಿಚಾರಕರು ಕುಳಿತುಕೊಳ್ಳುವ ಕೊಠಡಿ ಛಾವಣಿ ಶಿಥಿಲಗೊಂಡು ಬೀಳುವ ಅಪಾಯದಲ್ಲಿದೆ. ಕಟ್ಟಡದಲ್ಲಿ ಜೀವನ ಮಾಡುವ ಪರಿಸ್ಥಿತಿ ಇಲ್ಲಿನ ಸಿಬ್ಬಂದಿಗಳಾಗಿದೆ. ಈ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

 ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಗಮನಹರಿಸಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಜನಾಅಭಿಪ್ರಾಯ ಮುಖಂಡ ಅಬ್ದುಲ್ ನಬಿ ಅವರು ಮನವಿ ಮಾಡಿ ಕೊಂಡಿದ್ದಾರೆ. 


ಸುದ್ದಿ ಓದಿ