ಜಮಖಂಡಿ

ಕೃಷ್ಣಾತೀರ ರೈತ ಸಂಘದ ಆಶ್ರಯದಿಂದ ರೈತರ ಸಭೆ

ಕೃಷ್ಣಾತೀರ ರೈತ ಸಂಘದ ಆಶ್ರಯದಿಂದ ರೈತರ ಸಭೆ

ಲೋಕದರ್ಶನ ವರದಿ,

ಜಮಖಂಡಿ04: ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಚಿಕ್ಕಪಡಸಲಗಿ ಬ್ಯಾರೇಜ್ ಹಿನ್ನೀರೆತ್ತುವ ಮತ್ತು ಗೇಟ್ ಅಳವಡಿಸುವ ಕಾರ್ಯ ಮಾಡಲಾಗುವದು. ನೂತನ 200 ಗೇಟ್ ತಯಾರಿಸಲು ಮತ್ತು ವಿದ್ಯುತ್ ಬಾಕಿ ಬಿಲ್ಲ ಪಾವತಿಸಲು ಅಂದಾಜು 4 ಕೋಟಿ ವೆಚ್ಚ ತಗಲುತ್ತದೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.

ತಾಲ್ಲೂಕಿನ ಆಲಗೂರ ಚಂದ್ರವ್ವತಾಯಿ ದೇವಸ್ಥಾನದಲ್ಲಿ ಕೃಷ್ಣಾತೀರ ರೈತ ಸಂಘದ ಆಶ್ರಯದಲ್ಲಿ ನಡೆದ ರೈತರ ಸಭೆಯಲ್ಲಿ ಮಾತನಾಡಿದರು.

ಒಂದು ಎಚ್.ಪಿ ಗೆ ಒಂದು ಸಾವಿರದಂತೆ ವಂತಿಗೆ ಹಣ ಸಂಗ್ರಹಿಸುವದು. ಪ್ರತಿ ರೈತರು ನ, 7 ಒಳಗಾಗಿ ಶೇ.76 ರಷ್ಟು ಹಣ ಸಂಗ್ರಹಿಸಿ ಪಾವತಿಸಿದರೆ ಕಾಮಗಾರಿ ಪ್ರಾರಂಭಿಸಲಾಗುವದು, ಹಿಂದಿನ ಬಾಕಿ ಹಣ ಸೇರಿ ಅಂದಾಜು 7.80 ಕೋಟಿ ನೀರೆತ್ತುವ ಕಾರ್ಯಕ್ಕೆ ತಗಲುತ್ತದೆ. 2021ರ ವರೆಗೆ 8.44ಕೋಟಿ ಹಣ ಬಾಕಿ ಇದೆ. ಸರ್ಕಾರ ಇತ್ತೀಚೆಗೆ 2.7 ಕೋಟಿ ಅನುದಾನ ನೀಡಿದೆ. ಪ್ರತಿವರ್ಷ ನೀರು ಎತ್ತುವ ಕಾರ್ಯಕ್ಕೆ 2.63 ಕೋಟಿ ಖರ್ಚಾಗುತ್ತದೆ, ನೂತನ 200 ಗೇಟ್ ತಯಾರಿಸಲು 55 ಲಕ್ಷ, ಒಂದು ವರ್ಷಕ್ಕೆ ವಿದ್ಯುತ್ ಬಿಲ್ 36 ಲಕ್ಷ ಸೇರಿ ಒಂದು ಕೋಟಿಗೂ ಅಧಿಕ ಹಣ ಬೇಕಾಗುತ್ತದೆ ಎಂದರು.

ಮುಖಂಡ ಬಿ. ಎಸ್. ಸಿಂಧೂರ ಮಾತನಾಡಿ, ಅಂದಾಜು 4500 ಪಂಪಸೆಟ್ಗಳು ಕಾರ್ಯ ನಿರ್ವಹಿಸುತ್ತಿವೆ. ಕನಿಷ್ಠ 4 ಸಾವಿರ ಪಂಪಸೆಟ್ ಬಳಕೆದಾರರು ವಂತಿಕೆ ನೀಡಬೇಕು, 25 ರಿಂದ 30 ದಿನ ನೀರು ಎತ್ತಲು ಸಾಧ್ಯವಾಗುತ್ತದೆ. ಇದರಿಂದ 1.5 ಟಿ.ಎಮ್.ಸಿ ನೀರು ಸಂಗ್ರಹವಾಗಲಿದೆ. ಈಗಾಗಲೇ ಆಲಮಟ್ಟಿಯಲ್ಲಿ 89 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಇದರಲ್ಲಿ 15 ಟಿಎಂಸಿ ನೀರನ್ನು ಕೆಳಭಾಗದ ಪ್ರದೇಶಕ್ಕೆ ಬಿಡಲಾಗುತ್ತಿದೆ. ಹಿಪ್ಪರಗಿ ಬ್ಯಾರೇಜ್ನಲ್ಲಿ 5.5 ಟಿಎಮ್.ಸಿ ನೀರು ಸಂಗ್ರಹವಿದೆ. ಚಿಕ್ಕಪಡಸಲಗಿ ಬ್ಯಾರೇಜ್ನಲ್ಲಿ 4 ಟಿ.ಎಮ್.ಸಿ ನೀರು ಸಂಗ್ರಹವಿದೆ. ಹಿಪ್ಪರಗಿ ಬ್ಯಾರೇಜ್ನಲ್ಲಿಯ 6ರ ಪೈಕಿ 4 ಟಿ.ಎಮ್.ಸಿ ನೀರು ಮೂರು ತಿಂಗಳಿನಲ್ಲಿ ಬಳಕೆಯಾದರೆ 2 ನೀರು ಉಳಿಯುತ್ತದೆ. ಅದರಲ್ಲಿರುವ 1 ಟಿ.ಎಮ್.ಸಿ ನೀರು ಮೇ ಅಂತ್ಯದಲ್ಲಿ ಬಿಡುಗಡೆ ಮಾಡಿದರೆ ಯಾವುದೇ ನೀರಿನ ಸಮಸ್ಯೆ ಉಲ್ಬಣವಾಗುದಿಲ್ಲ ಎಂದರು.

ಮಾಜಿ ವಿ.ಪ ಸದಸ್ಯ ಜಿ. ಎಸ್ ನ್ಯಾಮಗೌಡ, ಮುದಕಪ್ಪ ಬೆನ್ನೂರ, ಸಂಗಪ್ಪ ದೇಸಾಯಿ ಚಂದ್ರಪ್ಪ ಬೆಳ್ಳೂರ, ಸೋಮಣಗೌಡ ಪಾಟೀಲ, ಅಣ್ಣಾಸಾಬ ತೇಲಿ, ಮಲ್ಲಪ್ಪ ಪೂಜಾರಿ, ಕೆ. ಕೆ.ತುಪ್ಪದ, ಎಂ.ಎಸ್.ತೇಲಿ, ಪದ್ಮಕುಮಾರ ಪಾಟೀಲ, ಕಾಡಪ್ಪ ದೇಸಾಯಿ, ಮಾಳಪ್ಪ ಕುರಣಿ ಮಾತನಾಡಿದರು. ಕೃಷ್ಣಾ ತೀರ ರೈತ ಸಂಘದ ಅಧ್ಯಕ್ಷ ರಾಜೇಂದ್ರಗೌಡ ಪಾಟೀಲ, ಈಶ್ವರ ಕರಬಸನವರ, ಪದ್ಮಣ್ಣ ಜಕನೂರ, ವರ್ಧಮಾನ ನ್ಯಾಮಗೌಡ, ಸುರೇಶಗೌಡ ಪಾಟೀಲ, ಅರ್ಜುನ ದಳವಾಯಿ, ಅಭಯಕುಮಾರ ನಾಂದೇಕರ, ಪ್ರಕಾಶ ಕಣಬೂರ ಸೇರಿದಂತೆ ಅನೇಕ ರೈತರು ಇದ್ದರು. 



ಸುದ್ದಿ ಓದಿ