ಇಂಡಿ

ಯೋಜನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ರೈತರಿಗೆ ಸಂತಸ: ಕಿವುಡೆ

ಯೋಜನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ರೈತರಿಗೆ ಸಂತಸ: ಕಿವುಡೆ

ಇಂಡಿ26: ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ನೀರನ್ನು ಎತ್ತಿ ಇಂಡಿ ಹಾಗೂ ನಾಗಠಾಣ ಮತಕ್ಷೇತ್ರದ 28 ಸಾವಿರ ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಡಿಸುವ ಮಹತ್ವದ ಯೋಜನೆಯಾದ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿದ್ದು ಈ ಭಾಗದ ರೈತರಿಗೆ ಸಂತಸ ತಂದಿದೆ ಎಂದು ಬಿಜೆಪಿ ಇಂಡಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ ಹೇಳಿದರು. 

ಅವರು ಶುಕ್ರವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. 

ಹಲವಾರು ವರ್ಷಗಳಿಂದ ಈ ಯೋಜನೆ ಜಾರಿಯಾಗಲು ರೈತರು ಹೋರಾಟ ಮಾಡಿದ್ದರು. ಆ ಕಾರ್ಯ ನಮ್ಮ ಸರಕಾರದಲ್ಲೇ ಆಗಿದ್ದು ಖುಷಿ ತಂದಿದೆ. ಇತ್ತೀಚೆಗೆ ರೈತರು ಹೋರಾಟ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಜಿಲ್ಲೆಯ ಸಂಸದರು ಹಾಗೂ ಪಕ್ಷದ ಮುಖಂಡರು ರೇವಣಸಿದ್ದೇಶ್ವರ ಏತ ನೀರಾವರಿಗೆ ಅನುಮೋದನೆ ನೀಡಿ ಹಣ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದರು. ಈಗ ನೀಡಿದ್ದ ಭರವಸೆ ಈಡೇರಿಸಿದ್ದಾರೆ ಎಂದರು. 

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಹಾಗೂ ಮುಖ್ಯಮಂತ್ರಿಗಳು ಹೆಚ್ಚು ಮುತುವರ್ಜಿವಹಿಸಿ ಈ ಯೋಜನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದ್ದು, ಈ ಯೋಜನೆಯಿಂದ ಇಂಡಿ ಹಾಗೂ ನಾಗಠಾಣ ಮತಕ್ಷೇತ್ರದ ಹಳ್ಳಿಗಳು ನೀರಾವರಿಯಾಗಲಿದೆ. ಹೀಗಾಗಿ ಇಂಡಿ, ನಾಗಠಾಣ ಕ್ಷೇತ್ರಗಳ ರೈತರ ಪರವಾಗಿ ಬೊಮ್ಮಾಯಿ ಸರಕಾರಕ್ಕೆ ಅಭಿನಂದಿಸುವುದಾಗಿ ತಿಳಿಸಿದರು. 

ಸುದ್ದಿ ಓದಿ