ಬಿಜೆಪಿ ಪಕ್ಷದಿಂದ ರೈತರ ಉದ್ಧಾರ ಸಾಧ್ಯವಿಲ್ಲ: ರಾಜುಗೌಡ ಪಾಟೀಲ
ಲೋಕದರ್ಶನ ವರದಿ
ಕಾಗವಾಡ 12: ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿ ಪಕ್ಷದಿಂದ ರೈತರ ಉದ್ಧಾರ ಸಾಧ್ಯವಿಲ್ಲ. ಇವರು ಅದಾನಿ, ಅಂಬಾನಿ ಪರವಾಗಿರುವಂತ ಸರ್ಕಾರ. ಇಂಥವರಿಂದ ದೇಶ ಉದ್ಧಾರವಾಗಲು ಸಾಧ್ಯವಿಲ್ಲ. ಇದು ಸಿದ್ಧಾಂತದ ಮಾತು. ಇವರನ್ನು ಹೀಗೆ ಆಡಳಿತ ನಡೆಸಲು ಬಿಟ್ಟರೆ ದೇಶದಲ್ಲಿ ಮುಂದೊಂದು ದಿನ ತಿನ್ನಲು ಅನ್ನ ಕೂಡ ಸಿಗುವುದು ಕಷ್ಟವಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ರಾಜುಗೌಡ ಪಾಟೀಲ ಆಕ್ರೋಶ ವ್ಯಕ್ತ ಪಡಿಸಿದರು.
ಅವರು ರವಿವಾರ ಐನಾಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದರು.
ಬಿಜೆಪಿ ಪಕ್ಷ ಉದ್ದಿಮೆದಾರರ ಹಣ ಬಲಹೊಂದಿದವರ ಪರವಾಗಿದ್ದಾರೆ. ಪೆಟ್ರೋಲ್, ಡಿಜೆಲ್ ಬೆಲೆ ಏರಿಸುವ ಮೂಲಕ ದೇಶವನ್ನು ವಿನಾಶದತ್ತ ಕೊಂಡೊಯ್ದಿದ್ದಾರೆ. ಕೃಷಿ ಕಾಯ್ದೆಯನ್ನು ಜಾರಿಗೆ ತಂದು ರೈತರ ಜೀವವನ್ನೇ ಬಲಿ ಪಡೆದುಕೊಂಡರು. ನಂತರ ಹೋರಾಟಕ್ಕೆ ಮಣಿದು ಹಿಂದೆ ಪಡೆದರು. ಆದರೆ ಪ್ರಾಣ ಕಳೆದುಕೊಂಡವರ ಜೀವ ಮರಳಿ ಬರುತ್ತದೆ ಏನು ಎಂದು ಪ್ರಶ್ನಿಸಿದರು.
ಪ್ರತಿದಿನ ಎರಡು ಬಾರಿತೋಟಕ್ಕೆ ಹೋಗುವ ನಾವು ಪೆಟ್ರೋಲ್ ಬೆಲೆ ಗಗನಕ್ಕೇರಿಸಿರುವದರಿಂದ ಒಂದೇ ಬಾರಿತೋಟಕ್ಕೆ ಹೋಗುವ ಪರಿಸ್ಥಿತಿ ಬಂದೊದಗಿದೆ ಎಂದರು.
ಬಿಜೆಪಿ ಸಂಪೂರ್ಣ ಆರ್.ಎಸ್.ಎಸ್ ಅಜೆಂಡಾ ಇದರಿಂದ ಬಡವರ ರೈತರ ಅಭಿವೃದ್ಧಿ ಸಾಧ್ಯವಿಲ್ಲ. 1948ರ ಜಾಳಪೋಳದಲ್ಲಿ ಭೂಮಿಯನ್ನು ಕಳೆದುಕೊಂಡ ಸಿಟ್ಟು ಅವರಿಂದ ಇನ್ನು ಹೋಗಿಲ್ಲ. ಹಾಗಾದರೆ ನಾವು ಕೂಡ 7-8 ನೂರು ಎಕ್ಕರ ಭೂಮಿಯನ್ನು ಕಳೆದುಕೊಂಡಿದ್ದೇವೆ. ನಮಗೆಷ್ಟು ಸಿಟ್ಟು ಇರಬಾರದು ಎಂದು ರಾಜುಗೌಡ ಪಾಟೀಲ ಹೇಳಿದರು.
ಆದ್ದರಿಂದ ಇಂಥ ಪಕ್ಷವನ್ನು ಎಲ್ಲರು ತಿರಸ್ಕೃರಿಸಬೇಕು, ಜನಪರವಾದಂತಾ, ಬಡವ, ಬಲ್ಲಿದ, ಹಿಂದೂಳಿದ ದಲಿತರ ಪರವಾಗಿರುವಂತಾ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ರಾಜುಗೌಡ ಪಾಟೀಲ ಮನವಿ ಮಾಡಿದರು.