ಇಂಡಿ

ರೈತರು ಈ ದೇಶದ ಬೆನ್ನೆಲುಬು: ಬಿರಾದಾರ

ರೈತರು ಈ ದೇಶದ ಬೆನ್ನೆಲುಬು: ಬಿರಾದಾರ


ಇಂಡಿ: ರೈತರು ಈ ದೇಶದ ಬೆನ್ನೆಲುಬು. ರೈತರಿದ್ದರೆ ಮಾತ್ರ ದೇಶ ಮತ್ತು ಉಳಿದ ಎಲ್ಲ ವರ್ಗ ನೆಮ್ಮದಿಯಿಂದ ಇರಲು ಸಾಧ್ಯ. ರೈತರಿಗಾಗಿ ಭಾಜಪ ಸರಕಾರ ಅನೇಕ ಯೋಜನೆಗಳನ್ನು  ನೀಡಿದೆ ಎಂದು ಬಿಜೆಪಿ ರೈತಮೋರ್ಚಾ ಜಿಲ್ಲಾ ಅಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು. 

ಅವರು ಗುರುವಾರ ತಾಲ್ಲೂಕಿನ ರೂಗಿ ಗ್ರಾಮದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ನಿಮಿತ್ಯ ಹತ್ತಾರು ಮಾದರಿ ರೈತರಿಗೆ ಸತ್ಕರಿಸಿ ಮಾತನಾಡಿದರು. 

ರೈತರು ಜಮೀನಿನಲ್ಲಿ ಬೆಳೆ ಬೆಳೆಯುವುದರ ಜೊತೆಗೆ ಉಪಕಸುಬುಗಳಾದ ಆಡು ಸಾಕಾಣಿಕೆ, ಕೋಳಿ ಸಾಕಾಣಿಕೆ, ಹೈನುಗಾರಿಕೆಗಳನ್ನು ಮಾಡಿ ಲಾಭ ಗಳಿಸಬೇಕೆಂದು ತಿಳಿಸಿದರು. 

ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ ಮಾತನಾಡಿ ದೇಹ ದಷ್ಟ-ಪುಷ್ಟವಾಗಿರಬೇಕಾದರೆ ದೇಹಕ್ಕೆ ಆಹಾರ ಬೇಕು. ಅಂತಹ ಆಹಾರ ತಯಾರಕರು ನಮ್ಮ ರೈತರು. ರೈತರು ಎಂದೂ ಹೆಚ್ಚಿಗೆ ಆಸೆ ಮಾಡದೆ ಇತರರಿಗೆ ದಾನ ಧರ್ಮ ಮಾಡುತ್ತಾರೆ. ರೈತರಂತಹ ಉದಾರ ಮನಸ್ಸು ಬೇರೆ ವರ್ಗದ ಜನರಿಗೆ ಇರುವುದಿಲ್ಲ ಎಂದರು. 

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ, ಜಟ್ಟೆಪ್ಪ ಮರಡಿ, ಮಹಾದೇವ ಕೋಟಗೊಂಡ, ಕೆಂಚಪ್ಪ ನಿಂಬಾಳ, ಬಸಣ್ಣ ಬೇನೂರ, ಭೀಮರಾಯ ಯಳಸಂಗಿ, ವಾಸು ಕೋಟಗೊಂಡ, ಸಿದ್ದಣ್ನ ಗಿಣ್ಣಿ, ಗುರ​‍್ಪ ಅಗಸರ್, ವಿಠ್ಠಲ ಲಚ್ಯಾಣ, ಶಾಂತು ಚೀಲಿ, ಗಂಗಾಧರ ಮಾಶ್ಯಾಳ, ಮಲ್ಲು ವಾಲೀಕಾರ ಮತ್ತಿತರರು ಇದ್ದರು. 


ಸುದ್ದಿ ಓದಿ