ಸರಿಯಾದ ಸಮಯಕ್ಕೆ ಹರಿದು ಬರುತ್ತಿರುವ ನೀರು ರೈತರಲ್ಲಿ ಸಂತಸ
ಇಂಡಿ: ವಿಜಯಪೂರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ ಬಿ ಪಾಟೀಲ ಅವರು ಹಾಗೂ ಜಿಲ್ಲೆಯ ಎಲ್ಲಾ ಶಾಸಕರ ಹಾಗೂ ಅಧಿಕಾರಿಗಳ ಪ್ರಾಮಾಣಿಕ ಪ್ರಯತ್ನದಿಂದ, ಜಿಲ್ಲೆಯ ಎಲ್ಲಾ ಕಾಲುವೆಗಳ ಮೂಲಕ ನೀರು ಹರಿಸಲಾಗುತ್ತಿದೆ ಅದರಂತೆ ಇಂಡಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ತಿಡಗುಂದಿ ಕಾಲುವೆ ಮೂಲಕ ನೀರು ಸರಬರಾಜು ಮಾಡುತ್ತಿರುವುದು ರೈತಾಪಿ ವರ್ಗದಲ್ಲಿ ಸಂತಸ ಮನೆ ಮಾಡಿದೆ.
ಇಂಡಿ ತಾಲ್ಲೂಕಿನ ತಡವಲಗಾ ಅಥರ್ಗಾ ನಿಂಬಾಳ ಹಂಜಗಿ ಕೆರೆಗಳು ಸೇರಿದಂತೆ ಅನೇಕ ಗ್ರಾಮಗಳಿ ತಿಡಗುಂದಿ ಕಾಲುವೆ ಮೂಲಕ ಎರಡೂ ದಿನಗಳಿಂದ ನೀರು ಹರಿಬಿಡಲಾಗಿದೆ. ಮಹಾರಾಷ್ಟ್ರ ರಾಜ್ಯದ ಘಟ ಪ್ರದೇಶದಲ್ಲಿ ಹಾಗೂ ಬೆಳಗಾವಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ನದಿಯಿಂದ ಬಾರಿ ಪ್ರಮಾಣದ ನೀರು ಆಲಮಟ್ಟಿ ಅಣೆಕಟ್ಟೆಯನಲ್ಲಿ ಸಂಗ್ರಹವಾಗುತ್ತದೆ ಹಾಗೂ ಅಷ್ಟೇ ಪ್ರಮಾಣದಲ್ಲಿ ನೀರು ಆಣೆಕಟ್ಟಿನಿಂದ ಹೊರ ಬಿಡಲಾಗುತ್ತದೆ.ಇದನು ಅರಿತ ನೀರಾವರಿ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ಎಲ್ಲಾ ಕಾಲುವೆಗಳ ಮೂಲಕ ನೀರು ಹರಿಸುವ ಮೂಲಕ ರೈತರಿಗೆ ಹಾಗೂ ಜನ ಜಾನುವಾರುಗಳಿಗೆ ಕುಡಿಯಲು ಹಾಗೂ ಹೊಲ ಗದ್ದೆಗಳಿಗೆ ನೀರು ಪೂರೈಸುವ ಮೂಲಕ ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಯ ಅಧಿಕಾರಿಗಳ ನಡೆ ರೈತಾಪಿ ವರ್ಗಕ್ಕೆ ಸಂತಸ ತಂದಿದೆ.ಆದರೆ ಅಧಿಕಾರಿಗಳು ಟೇಲ್ ಎಂಡ್ ಅವರಿಗೆ ನೀರು ಹರಿಸಿ ಜಿಲ್ಲೆಯ ಎಲ್ಲಾ ಕರೆ ಕಟ್ಟೆಗಳು ತುಂಬಿಸಿ ನೀರಿನ ದಾಹ ತೀರಿಸಲು ಮುಂದಾಬೇಕು ಎಂಬುವುದೇ ರೈತರ ಆಸೆಯಾಗಿದೆ.
ಯಶವಂತರಾಯಗೌಡ ಪಾಟೀಲ.ಶಾಸಕರು ಇಂಡಿ.ಇಂಡಿ ತಾಲೂಕಿನ ಎಲ್ಲಾ ಕೆರೆಗಳು ಹಾಗು ಕಾಲುವೆ ಮೂಲಕ ಟೇಲ್ ಎಂಡ್ ಅವರಿಗೆ ನೀರು ಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.ಆ ಕೆಲಸ ಅಧಿಕಾರಿಗಳು ಮಾಡುತ್ತಿದ್ದಾರೆ. ಅಬೀದ್ ಗದ್ಯಾಳ ಉಪವಿಭಾಗಾಧಿಕಾರಿ ಇಂಡಿ.ಇಂಡಿ ತಾಲೂಕಿನ ಜನರ ಬೇಡಿಕೆಯಂತೆ ತಾಲ್ಲೂಕಿನ ಎಲ್ಲಾ ಕರೆ ಕಟ್ಟೆಗಳಿಗೆ ನೀರು ಹರಿಸಲಾಗುವುದು, ಆಲಮಟ್ಟಿ ಜಲಾಶಯಲ್ಲಿ ಸಾಕಷ್ಟು ನೀರು ಇರುವುದರಿಂದ ಈ ಬಾರಿ ಎಲ್ಲಾ ಕೆರೆ ಹಾಗೂ ಕಾಲುವೆಗೆ ನೀರು ಹರಿಸುತ್ತೆವೆ.
ಗುರುನಾಥ ಬಗಲಿ. ಅಖಿಲ ಭಾರತೀಯ ಕಿಸಾನ್ ಸಂಘದ ರಾಜ್ಯ ಉಪಾಧ್ಯಕ್ಷರು.ಈಗ ಆಲಮಟ್ಟಿ ಅಣೆಕಟ್ಟೆಯನಲ್ಲಿ ಸಾಕಷ್ಟು ನೀರು ಇರುವುದರಿಂದ ಜಿಲ್ಲೆಯ ಎಲ್ಲಾ ಕೆರೆಗಳು ಕಾಲುವೆಗಳು, ಹಾಗೂ ಹಳ್ಳಿ ಕೊಳ್ಳಗಳಿಗೆ ನೀರು ಬೀಡಲು ಇದು ಸರಿಯಾದ ಸಮಯ ಇದನ್ನು ಅರಿತು ಅಧಿಕಾರಿಗಳು ಟೇಲ್ ಎಂಡ್ ಅವರಿಗೆ ನೀರು ಹರಿಸಬೇಕು.ಹಾಗೂ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆ ಮೂಲಕ ಟೇಲ್ ಎಂಡ್ ಅವರಿಗೆ ನೀರು ಹರಿಸಬೇಕು.