ರೈತರ ದಿನ: ರೈತ ಮುಖಂಡರಿಗೆ ಸನ್ಮಾನ
ಶಿಗ್ಗಾವಿ : ಪಟ್ಟಣದ ಕೆನರಾ ಬ್ಯಾಂಕನಲ್ಲಿ ರೈತರ ದಿನದ ಅಂಗವಾಗಿ ತಾಲೂಕಿನ ಪ್ರಮುಖ ರೈತ ಮುಖಂಡರನ್ನು ರೈತ ಸಮುದಾಯದ ಪರವಾಗಿ ಪಾಂಡುರಂಗ ಬೀಮಪ್ಪ ದಂಡಿನ, ನಿಂಗಪ್ಪ ನೀಲಪ್ಪ ಸೋಲಾರಗೊಪ್ಪ, ಕಲ್ಲಪ್ಪ ಗುರುಶಿದ್ದಪ್ಪ ಆಜೂರ, ಮಹಾದೇವಪ್ಪ ಬಸಪ್ಪ ಮೇಟಿ, ಗದಿಗೆಪ್ಪ ಬೇಡಕಿ, ಮಹಾಲಿಂಗಪ್ಪ ಕುನ್ನೂರ ಇವರೆಲ್ಲರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸನ್ಮಾನಿಸಿ ಮುಖ್ಯ ಪ್ರಭಂದಕ ಕಿರಣ ಪಾಟೀಲ ಮಾತನಾಡಿ ರೈತರೇ ದೇಶದ ಬೆನ್ನಲುಬು ರೈತರ ಪ್ರಾಮುಖ್ಯತೆಯನ್ನು, ರೈತರಿಗೆ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಖೆಯ ಕೃಷಿ ಅಧಿಕಾರಿ ಜ್ಯೋತ್ಸಾ ಮಾನೆ ಸ್ವಾಗತಿಸಿದರು, ಸಿದ್ದಪ್ಪ ನಿರೂಪಿಸಿ ವಂದಿಸಿದರು.