ಸಿರುಗುಪ್ಪ

ಜೋಳ ಖರೀದಿ ಕೇಂದ್ರದಲ್ಲಿ ತಾಂತ್ರಿಕ ದೋಷ ಸರಿ ಪಡಿಸುವಂತೆ ರೈತರ ಆಗ್ರಹ

ಜೋಳ ಖರೀದಿ ಕೇಂದ್ರದಲ್ಲಿ ತಾಂತ್ರಿಕ ದೋಷ ಸರಿ ಪಡಿಸುವಂತೆ ರೈತರ ಆಗ್ರಹ

ಸಿರುಗುಪ್ಪ 10: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿರುವ ಜೋಳ ಖರೀದಿ ಕೇಂದ್ರದಲ್ಲಿನ ತಾಂತ್ರಿಕ ದೋಷ ಸರಿ ಪಡಿಸುವಂತೆ ಸಿರುಗುಪ್ಪ ತಾಲ್ಲೂಕಿನ ಮೂಟೆ ಸುಗೂರ್, ಚಾಣಕನೂರು, ಮಾಳಾಪೂರ, ಭಂಡ್ರಾಳ್, ಗೋಸ್ಬಾಳ್, ಅಗಸನೂರು, ತಾಳೂರು ಸೇರಿದಂತೆ ವಿವಿಧ ಗ್ರಾಮಗಳ ರೈತರು ತಾಳೂರು ಹುಚ್ಚಪ್ಪ, ಮೂಟೆ ಸೂಗೂರ್ ರಾಮಲಿಂಗಪ್ಪ ಕುರುವಳ್ಳಿ ಲಕ್ಷ್ಮಣ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ವಿ ಮಾರುತಿ ಸಿರುಗುಪ್ಪದ ಮೊಹಮ್ಮದ್ ಇಬ್ರಾಹಿಂ ಮೊಹಮ್ಮದ್ ರಫಿ ಮೊಹಮ್ಮದ್ ನೌಶಾದ್ ಅಲಿ ತಾಲ್ಲೂಕಿನ ಅನೇಕ ರೈತರು ತಾವು ಬೆಳೆದ ಜೋಳವನ್ನು ಸರ್ಕಾರದ ಬೆಂಬಲ ಬೆಲೆಗೆ ಮಾರಾಟ ಮಾಡುವುದಕ್ಕಾಗಿ ಖರೀದಿ ಕೇಂದ್ರದ ಹತ್ತಿರ ಜಮಾಯಿಸಿದ ನೋಂದಣಿ ಕಾರ್ಯಕ್ರಮ ಕಾರ್ಯಾಗಾರ ಸಮಯ ಮುಗಿದ ನಂತರ ಸರತಿ ಸಾಲಿನಲ್ಲಿ  ರೈತರು ಕುಳಿತರು ನೋಂದಣಿ ಕೇಂದ್ರದಲ್ಲಿನ ಸರ್ವರ್ ಇಲ್ಲದೆ ತಾಂತ್ರಿಕ ದೋಷದಿಂದಾಗಿ ನೋಂದಣಿ ಕಾರ್ಯ ವಿಳಂಬ ವಾದ್ದರಿಂದ ಸುಮಾರು 250ರೈತರು ಆಕ್ರೋಶ ವ್ಯಕ್ತಪಡಿಸಿದರು ಪ್ರತಿ ಸಲವೂ ಭತ್ತ ಮತ್ತು ಜೋಳದ ಮಾರಾಟಕ್ಕೆ ರೈತರು ಹರ ಸಾಹಸ ಪಡುತ್ತಾರೆ ಎಪಿಎಂಸಿ ಯಲ್ಲಿ ಶುದ್ಧ ಕುಡಿಯುವ ನೀರು ಸುಸಜ್ಜಿತ ರೈತ ಭವನ ಮತ್ತು ಹೋಟೆಲ್ ಇಲ್ಲದೆ ಮೂಲಭೂತ ಸೌಲಭ್ಯ ಒದಗಿಸಬೇಕು ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕೆಂದು ಒತ್ತಾಯಿಸಿದರು. ಬಳ್ಳಾರಿ ಜಿಲ್ಲಾ ಆಹಾರ ನಾಗರಿಕ ಸರಬರಾಜು ನಿಗಮ ಜಿಲ್ಲಾ ವ್ಯವಸ್ಥಾಪಕ ನಾರಾಯಣಸ್ವಾಮಿ ಮಾತನಾಡಿ ಬೆಂಗಳೂರಿನ ಕಚೇರಿಯಿಂದಲೇ ಸರ್ವರ್ ಬಾರದಿರುವುದರಿಂದ ಜೋಳ ಖರೀದಿ ನೋಂದಣಿ ಕೇಂದ್ರದಲ್ಲಿ ಸಮಸ್ಯೆಯಾಗಿದೆ ಕೂಡಲೇ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಇತ್ಯರ್ಥ ಗೊಳಿಸಲಾಗುವುದು ಎಂದರು. 


ಸುದ್ದಿ ಓದಿ