ಅಪಾರ ಮಳೆ ನದಿಗಳು ತುಂಬಿ ಹರಿಯುತ್ತಿರುವುದರಿಂದ ರೈತರ ಬೆಳೆಗಳು ಜಲಾವೃತ : ಶಾಸಕ ಪ್ರಕಾಶ ಭೇಟಿ
ರಾಣಿಬೆನ್ನೂರ 22 : ತಾಲೂಕಿನಾದ್ಯಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ಹಾಗೂ ಮಲೆನಾಡಿನಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ತುಂಗಭದ್ರ ಮತ್ತು ಕುಮದ್ವತಿ ನದಿಗಳು ತುಂಬಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ರೈತರ ಬೆಳೆಗಳು ಜಲಾವೃತಗೊಂಡಿರುವ ಪ್ರದೇಶಗಳಾದ ಮುಷ್ಟೂರ, ಕುಪ್ಪಲೇಲೂರ, ಮಾಗನೂರ, ಲಿಂಗದಹಳ್ಳಿ, ಕೋಣನತಲೆ ಗ್ರಾಮಗಳಿಗೆ ಶಾಸಕ ಪ್ರಕಾಶ ಕೋಳಿವಾಡ ಅವರು ಅಧಿಕಾರಿಗಳ ತಂಡದೊಂದಿಗೆ ಶನಿವಾರ ಬೇಟಿ ನೀಡಿ ಪರೀಶೀಲನೆ ನಡೆಸಿದರು.
ಈ ವೇಳೆ ಶಾಸಕ ಪ್ರಕಾಶ ಕೋಳಿವಾಡ ಮಾತನಾಡು, ಬಂಗಾಳಕೊಲ್ಲಿಯಲ್ಲಿ ಮಾನ್ಸೂನ್ ಚಂಡಮಾರುತದ ತೀರ್ವತೆ ಕ್ಷೀಣಗೊಳ್ಳುತ್ತಿದ್ದು, ಮಳೆ ಪ್ರಮಾಣ ಕಡಿಮೆ ಆಗುವ ಸಂಬಂವವಿರುತ್ತದೆ ಎಂದು ಹವಾಮಾನ ಇಲಾಖೆಯಿಂದ ಮಾಹಿತಿ ಪಡೆದಿರುತ್ತೇನೆ ಹಾಗಾಗಿ ರೈತರಲ್ಲಿ ಆತಂತ ಬೇಡ. ಮುಂಜಾಗೃತ ಕ್ರಮಕೈಗೊಳ್ಳುಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಹಾಯಕ ಕೃಷಿ ನಿರ್ದೆಶಕಿ ಶಾಂತಮಣಿ ಜಿ ಮಾತನಾಡಿ, ತಾಲ್ಲೂಕಿನಲ್ಲಿ ಜುಲೈ ಅಂತ್ಯಕ್ಕೆ ವಾಡಿಕೆ ಮಳೆ 301 ಮಿಮಿ ಇದ್ದು, ಇವತ್ತಿನವರೆಗೆ 399 ಮಿಮಿ ಮಳೆ ಆಗಿದ್ದು ವಾಡಿಕೆಗಿಂತ 98 ಮಿಮಿ ಮಳೆ ಹೆಚ್ಚಾಗಿದೆ ಇದರಿಂದ ತೇವಾಂಶ ಹೆಚ್ಚಾಗಿದೆ ಎಂದರು.
ಕುಪ್ಪೇಲೂರು ಹೋಬಳಿಯಲ್ಲಿ ಕೆಲವು ಗ್ರಾಮಗಳಲ್ಲಿ ತೇವಾಂಶ ಹೆಚ್ಚಾಗಿರುವ ಮೆಕ್ಕೆಜೋಳದ ತಾಕುಗಳಲ್ಲಿ ಬೆಳೆಯು ನೆರಳೆ ಮತ್ತು ಹಳದಿ ಬಣ್ಣಕ್ಕೆ ತಿರುಗುತ್ತಿದ್ದು ಸದರಿ ಬೆಳೆಗೆ 19:19:19 ನೀರಿನಲ್ಲಿ ಕರಗುವ ಗೊಬ್ಬರ 5ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಲಘು ಪೋಷಕಾಂಶ ಜೊತೆಗೆ ಸೇರಿಸಿ ಸಿಂಪಡಿಸಬೇಕು ಮತ್ತು ಹೊಲದಲ್ಲಿ ನೀರು ನಿಂತಿದ್ದರೆ ನೀರನ್ನು ಬಸಿದು ಹೋಗುವಂತೆ ಮಾಡಬೇಕು. ಸತುವಿನ ಕೊರತೆ ಇದ್ದಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿರುವ ಸತುವಿನ ಸಲ್ಪಟ್ನ್ನು ಪ್ರತಿ ಎಕರೆಗೆ 4-5 ಕೆ.ಜಿ ಮರಳಿನೊಂದಿಗೆ ಮಿಶ್ರಣ ಮಾಡಿ ಹೊಲದಲ್ಲಿ ಎರಚಬೇಕು ಎಂದರು.
ತಹಶೀಲ್ದಾರ ಕೆ. ಗುರುಬಸವರಾಜ, ಉಪತಹಶೀಲ್ದಾರ ಎಂ.ಎಸ್. ಕಡೂರ, ಕಂದಾಯ ನೀರೀಕ್ಷಕ ಮಂಜುನಾಥ ಕೆಂಚರಡ್ಡಿ, ತೋಟಗಾರಕೆ ಇಲಾಖೆಯ ಸಹಾಯಕ ನಿರ್ದೇಶಕ ನೂರಹ್ಮದ್ ಹಲಗೇರಿ, ಲೋಕೊಪ ಇಲಾಖೆಯ ಕಾರ್ಯನಿವಾಹಕ ಅಭಿಯಂತರ ಮರಿಸ್ವಾಮಿ, ರೈತ ಮುಖಂಡ ರವಿಂದ್ರಗೌಡ ಪಾಟೀಲ ಮತ್ತು ನೂರಾರು ರೈತರು ಇದ್ದರು.