ಸಿಡಿಲು ಬಡಿದು ರೈತ ಪೀರಾಪ್ಪಾ ಸಾವು
ಇಂಡಿ: ತಾಲೂಕಿನ ಚೋರಗಿ ಗ್ರಾಮದಲ್ಲಿ ಗುರುವಾರ ಸಾಯಂಕಾಲ ಸಿಡಿಲು ಬಡಿದು ರೈತ ಪೀರಾಪ್ಪಾ ಗೋವಿಂದ ಕೋರೆ(26) ಸಾವನ್ನಪ್ಪಿದ್ದಾರೆ. ಹೊಲದಲ್ಲಿ ರೈತ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದಿದೆ.
ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಡಿ. ಪಾಟೀಲ, ಗ್ರಾಮಲೆಕ್ಕಾಧಿಕಾರಿ ಎಸ್.ಹೆಚ್. ಲಾಸಂಗಿ, ಕಂದಾಯನೀರೀಕ್ಷಕ ಪಂಡೀತ ಕೊಡಹೊನ್ನ ಭೇಟಿ ನೀಡಿದ್ದಾರೆ.
ಈ ಕುರಿತು ಝಳಕಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.