ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ
ರಾಣೇಬೆನ್ನೂರು 27: ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಪ್ರಭಾರಿ ಪ್ರಾಚಾರ್ಯರಾದ ಡಾ. ಎಸ್. ಜಿ. ಮಾಕನೂರು ಉದ್ಘಾಟಿಸಿದರು. ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಪ್ರೊ. ಸಿ. ಎಂ. ಪರಮೇಶ್ವರ್ಪನವರು ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಭಾವನಾ ಪಾಟೀಲ್ , ವಿದ್ಯಾರ್ಥಿ ಸಂಯೋಜಕರಾದ ಎ. ದರ್ಶನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೀಕ್ಷಾ ಬಿ ಪಾಟೀಲ್ ಸ್ವಾಗತಿಸಿದರು. ರಕ್ಷಿತಾ ಎಂ ಬಾಳಿಕಾಯಿ ವಂದಿಸಿದರು. ಎಸ್. ಹೆಚ್. ಪುನೀತ್ ಹಾಗೂ ಅನುಷ ಎ ನಾಡಿಗರ್ ಕಾರ್ಯಕ್ರಮ ನಿರೂಪಿಸಿದರು.