ರಾಮಚಂದ್ರ ಗಾಣಿಗೇರಗೆ ಬೀಳ್ಕೊಡುಗೆ
ಗೋಕಾಕ 01: ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ರಾಮಚಂದ್ರ ಗಾಣಿಗೇರ ಅವರ ಸೇವೆ ಅವಿಸ್ಮರಣೀಯ ಎಂದು ಲೋಕೋಪಯೋಗಿ ಇಲಾಖೆಯ ಬೆಳಗಾವಿ ವೃತ್ತ ಅಧೀಕ್ಷಕ ಅಭಿಯಂತರ ಬಿ ವೈ ಪವಾರ ಹೇಳಿದರು.
ಅವರು, ಬುಧವಾರದಂದು ಲೋಕೋಪಯೋಗಿ ಇಲಾಖೆಯ ಉಪ ವಿಭಾಗ ಗೋಕಾಕ ಕಚೇರಿಯ ಸಿಬ್ಬಂದಿಗಳು ಹಾಗೂ ಗುತ್ತಿಗೆದಾರರು ಹಮ್ಮಿಕೊಂಡ ಬಿಳ್ಕೋಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ರಾಮಚಂದ್ರ ಗಾಣಿಗೇರ ಅವರನ್ನು ಸನ್ಮಾನಿಸಿ, ಮಾತನಾಡಿದರು.
ಲೋಕೋಪಯೋಗಿ ಇಲಾಖೆಯ ಉಪ ವಿಭಾಗ ಗೋಕಾಕ ಕಚೇರಿಯ ಸಿಬ್ಬಂದಿಗಳು ಹಾಗೂ ಗುತ್ತಿಗೆದಾರರು ಲೋಕೋಪಯೋಗಿ ಇಲಾಖೆಯ ಚಿಕ್ಕೋಡಿ ವಿಭಾಗದ ಅಭಿಯಂತರ ವ್ಹಿ ಎನ್ ಪಾಟೀಲ, ಸತೀಶ ಶುಗರ‍್ಸ ಎಮ್.ಡಿ ಸಿದ್ಧಾರ್ಥ ವಾಡೆನ್ನವರ, ಸತೀಶ ಶುಗರ‍್ಸನ ಎಲ್ ಆರ್ ಕಾರಗಿ ಸೇರಿದಂತೆ ಚಿಕ್ಕೋಡಿ, ಹುಕ್ಕೇರಿ, ರಾಯಭಾಗ ಹಾಗೂ ಅಥಣಿ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರರು ಇದ್ದರು.