ಶಿಗ್ಗಾವ್

5ನೇ ತರಗತಿ ಮಕ್ಕಳಿಗೆ ಬೀಳ್ಕೊಡಿಗೆ ಸಮಾರಂಭ

5ನೇ ತರಗತಿ ಮಕ್ಕಳಿಗೆ ಬೀಳ್ಕೊಡಿಗೆ ಸಮಾರಂಭ

ಶಿಗ್ಗಾವಿ, 02: ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ ವಸತಿ ಶಾಲೆಯಲ್ಲಿ 2023-24 ನೇ ಸಾಲಿನ ಸರಸ್ವತಿ ಪೂಜೆ, 5ನೇ ತರಗತಿ ಮಕ್ಕಳಿಗೆ ಬೀಳ್ಕೊಡಿಗೆ ಸಮಾರಂಭ ಮತ್ತು ವಾರ್ಷಿಕೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.  

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸರಸ್ವತಿ ಗಜಕೋಶ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಇಲಾಖೆಯ ಬಸವರಾಜ ಬಸರಿಕಟ್ಟಿ, ಮಿಸಿ ಸರ್ ಮುಖ್ಯ ಅತಿಥಿಗಳಾಗಿದ್ದರೆ, ನಿಲಯ ಪಾಲಕರಾದ ಮಂಗಳಾ ಪಾಟೀಲ, ರೂಪಾ ಸುಣಗಾರ, ಶಿವರಾಜ ಕಟ್ನೂರ ಸೇರಿದಂತೆ ಶಿಕ್ಷಕರು ಪಾಲಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ