ಸಿಂಧಗಿ

ಮಹಿಳಾ ಸಾಧಕಿಯರ ವೇಷ ಭೂಷಣದ ಸ್ಪರ್ಧೆ

ಮಹಿಳಾ ಸಾಧಕಿಯರ ವೇಷ ಭೂಷಣದ ಸ್ಪರ್ಧೆ

ಸಿಂದಗಿ: ನಗರದ ಜೆ.ಹೆಚ್‌.ಪಟೇಲ ಮಹಾವಿದ್ಯಾಲಯದಲ್ಲಿ ಮಹಿಳಾ ಘಟಕದ ವತಿಯಿಂದ ಪ್ರಶಿಕ್ಷಣಾರ್ಥಿಗಳಿಗೆ ಹಮ್ಮಿಕೊಂಡ ಮಹಿಳಾ ಸಾಧಕಿಯರ ವೇಷ ಭೂಷಣದ ಸ್ಪರ್ಧೆಯನ್ನು ಆಯೋಜನೆ ಮಾಡಲಾಯಿತು.  

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಮಣಿಗಳಾದ ಇಂದಿರಾ ಗಾಂಧಿ, ಸರೋಜಿನಿ, ಮಮತಾ ಬ್ಯಾನರ್ಜಿ, ನಾಯ್ಡು, ಕಿರಣ ಬೇಡಿ, ನಿರ್ಮಲಾ ಸೀತಾರಾಮನ್, ಗಂಗೂಬಾಯಿ ಹಾನಗಲ್, ಮದರ್ ತೇರೆಸಾ, ಸಾನಿಯಾ ಮಿರ್ಜಾ, ಕಲ್ಪನಾ ಚಾವ್ಹಾ-್ಲ, ಪಾತೀಮಾ ಬೀಬಿ ಸೇರಿದಂತೆ ಹಲವರ ವೇಷಗಳನ್ನು ಧರಿಸಿ ಮಹಿಳಾ ಪ್ರಶಿಕ್ಷಣಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.  

ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಹಸೀನಾ ಮುಜಾವರ, ದ್ವಿತೀಯ ಸ್ಥಾನವನ್ನು ಪೂಜಾ, ತೃತೀಯ ಸ್ಥಾನವನ್ನು ಜ್ಯೋತಿ ಗಾಡದ ಪಡೆದುಕೊಂಡಿದ್ದಾರೆ. 

ಇದೇ ಸಂದರ್ಭದಲ್ಲಿ ಪ್ರಾಧ್ಯಾಪಕಿ ಡಾ.ಸುಧಾ ಸುಣಗಾರ ಮಾತನಾಡಿ, ಈ ಕಾರ್ಯಕ್ರಮವು ನಮ್ಮ ಬಾಲ್ಯವನ್ನು ಜೀವನ ನೆನಪಿಸುಂತೆ ಮಾಡಿತು. ಎಲ್ಲಾ ಕ್ಷೇತ್ರದಲ್ಲಿ ಸಾಧನೆಗೈದ ಮಹಾನ್ ಸಾಧಕೀಯರು ತಮ್ಮ ಜೀವನದ ಸಮಸ್ಯೆಗಳನ್ನು ಬದಿಗೊತ್ತಿ ಸಾಧನೆಗೈದಿದ್ದಾರೆ. ಇದೇ ತರಹ ಇಂದಿನ ಯುವ ಪೀಳಿಗೆಯ ಮಹಿಳಾ ಮಣಿಗಳು ಸಾಧನೆಗೈದು ಹೆಣ್ಣು ಕುಲದ ಪ್ರಾಬಲ್ಯವನ್ನು ಎತ್ತಿ ಹಿಡಿಯಬೇಕು ಎಂದರು.  

ಈ ವೇಳೆ ಪ್ರಾಧ್ಯಾಪಕರಾದ ಹೊನ್ನಮ್ಮ ಕೆಂಭಾವಿ, ಎಸ್‌.ಬಿ.ಅಂಕಲಗಿ, ಸರೋಜಿನಿ ಹಿರೇಮಠ, ಎಸ್‌.ಆರ್‌.ಬಿರಾದಾರ, ಎಸ್‌.ಎಲ್‌.ಜಾಗೀರದಾರ, ಪಿ.ಜಿ.ಕತ್ತಿ, ಎಮ್‌.ಎಲ್‌.ಪರಮಾನಂದ ಮತ್ತಿತರಿದ್ದರು.  

ಸುದ್ದಿ ಓದಿ