ಮನರಂಜನೆ

ಖ್ಯಾತ ನಟ ರಾಕ್ ಲೈನ್ ಸುಧಾಕರ್ ನಿಧನ

ಖ್ಯಾತ ನಟ ರಾಕ್ ಲೈನ್ ಸುಧಾಕರ್ ನಿಧನ

ಬೆಂಗಳೂರು, ಸೆ 24 : ಹಾಸ್ಯ ಹಾಗೂ ಪೋಷಕ ಪಾತ್ರಗಳ ಮೂಲಕ ಜನಪ್ರಿಯತೆ ಗಳಿಸಿದ್ದ ಹಿರಿಯ ನಟ ರಾಕ್ ಲೈನ್ ಸುಧಾಕರ್ ವಿಧಿವಶರಾಗಿದ್ದಾರೆ.ಚಿತ್ರವೊಂದರ ಶೂಟಿಂಗ್ ವೇಳೆಯೇ ಹೃದಯಾಘಾತದಿಂದಾಗಿ ಅವರು ಕೊನೆಯುಸಿರೆಳೆದಿದ್ದಾರೆ.  ಅವರ ಅಗಲಿಕೆಗೆ ಚಂದನವನ ಶೋಕ ವ್ಯಕ್ತಪಡಿಸಿದೆ.   ಕೆಲ ದಿನಗಳ ಹಿಂದಷ್ಟೇ ಸುಧಾಕರ್​ ಕೊರೋನಾ ಸೋಂಕಿಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಸಂಪೂರ್ಣ ಗುಣಮುಖರಾದ ಹಿನ್ನೆಲೆಯಲ್ಲಿ ಮತ್ತೆ ಶೂಟಿಂಗ್​ ಕೆಲಸಗಳಲ್ಲಿ ಪಾಲ್ಗೊಂಡಿದ್ದರು.
ಸಿಂಪಲ್​ ಸುನಿ ನಿರ್ದೇಶನದ ಸಿನಿಮಾ ಶೂಟಿಂಗ್​ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿದೆ. ಈ ಕುರಿತು ಖುದ್ದು ಟ್ವೀಟ್ ಮೂಲಕ ನಿರ್ದೇಶಕ ಸುನಿ ಮಾಹಿತಿ ನೀಡಿದ್ದಾರೆ.“2020ರ ರೌದ್ರಾವತಾರ ಮುಂದುವರೆದಿದೆ.. ಸಿನಿಕಲಾವಿದರಾದ  ರಾಕ್ ಲೈನ ಸುಧಾಕರ್ ಅವರು ಇಂದು ಮೇಕಪ್ ಹಚ್ಚಿರುವಾಗಲೇ ಹೃದಯಘಾತದಿಂದ ನಮ್ಮನ್ನೆಲ್ಲಾ ಅಗಲಿದ್ದಾರೆ.. ಅವರ ಆತ್ಮಕ್ಕೆ ಶಾಂತಿ ಸಿಗಲಿ... ಓಂ ಶಾಂತಿ..’” ಎಂದು ನಿರ್ದೇಶಕ ಸುನಿ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.ಅಜಿತ್, ಉಡುಂಬಾ, ಟೋಪಿವಾಲಾ, ಜೂಮ್, ಚಮಕ್, ಪಟಾಕಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಕ್​ಲೈನ್​ ಸುಧಾಕರ್ ನಟಿಸಿದ್ದರು. ಅವರು ಮಾಡುತ್ತಿದ್ದ ಕಾಮಿಡಿ ಪಾತ್ರಗಳು ಎಲ್ಲರ ಗಮನ ಸೆಳೆದಿದ್ದವು.



ಸುದ್ದಿ ಓದಿ