ದಲಿತ ಸೇನೆ ಮೇಲೆ ಸುಳ್ಳ ಪ್ರಕರಣ : ಹನುಮಂತ ಯಳಸಂಗಿ
ಹೂವಿನಹಡಗಲಿ 19 : ದಲಿತ ಸೇನೆ ರಾಜ್ಯಾಧ್ಯಕ್ಷ ಹನುಮಂತ ಯಳಸಂಗಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಅಟ್ಟಹಾಸ ಮೆರೆಯುತ್ತಿರುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸುವಂತೆ ಒತ್ತಾಯಿಸಿ ದಲಿತ ಸೇನೆ ತಾಲೂಕು ಸಮಿತಿ ಪದಾಧಿಕಾರಿಗಳು ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಇದೇ ವೇಳೆ ದಲಿತ ಸೇನೆ ತಾಲೂಕು ಅದ್ಯಕ್ಷ ಸಿ.ದುರಗೇಶ. ಜಿಲ್ಲಾ ಉಪಾಧ್ಯಕ್ಷ ಪಿ.ನಿಂಗಪ್ಪ. ದೇವರಾಜ. ಆನಂದ, ಭರಮಪ್ಪ ನಾಗರಾಜ ಸಿ. ನಿಂಗಪ್ಪ. ಹೆಚ್.ಕೆಂಚಪ ಗಂಗಾಧರ ಇದ್ದರು.