ಸುಳ್ಳು ಬಜೆಟ್ ಜನ ಸಾಮಾನ್ಯರ ಬೆಲೆ ಏರಿಕೆ ಬಜೆಟ್ : ಪಾಟೀಲ
ಶಿಗ್ಗಾವಿ 09: ಬೆಲೆ ಏರಿಕೆ ಗ್ಯಾರಂಟಿ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುವ ದಿನಗಳಲ್ಲಿ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಅಧೋಗತಿಗೆ ತೆಗೆದುಕೊಂಡು ಹೋಗುವ ಎಲ್ಲ ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೇ ಸುಳ್ಳು ಭರವಸೆ ನೀಡಿ, ಅಧಿಕಾರಕ್ಕೆ ಬಂದ ಇವರು ಅವುಗಳನ್ನು ಈಡೇರಿಸಲು ಜನ ಸಾಮಾನ್ಯರ ಮೇಲೆ ಬೆಲೆ ಏರಿಕೆಯ ಹೊರೆ ಹೊರಿಸಿದ್ದಾರೆ. ಬಡವರ ಕಲ್ಯಾಣವೆಂಬ ಬೊಗಳೆ ಬಿಟ್ಟ ಇವರು ಇಂದು ಬಡವನ ಬಾಳಿಗೆ ಕೊಳ್ಳಿ ಇಟ್ಟಿದ್ದಾರೆ ಎಂದು ಬಾಜಫ ಕಾರ್ಯದರ್ಶಿ ರೇಣುಕನಗೌಡ ಪಾಟೀಲ ಬೇಸರ ವ್ಯಕ್ತಪಡಿಸಿದ್ದಾರೆ.