ಧಾರವಾಡ - ಹುಬ್ಬಳ್ಳಿ

ಫಕ್ಕೀರವ್ವ ಗುಡಿಸಾಗರ ಚಿಂತನ ಕಾರ್ಯಕ್ರಮ

ಫಕ್ಕೀರವ್ವ ಗುಡಿಸಾಗರ ಚಿಂತನ ಕಾರ್ಯಕ್ರಮ

ಧಾರವಾಡ 03: ಫಕ್ಕೀರವ್ವ ಗುಡಿಸಾಗರ ಒಬ್ಬ ಅಪ್ಪಟ ಗೀಗೀ ಪದದ ಕಲಾವಿದೆ ನಾನು ಕಂಡ ಹಾಗೆ ಫಕ್ಕೀರವ್ವ ಕೈಯಲ್ಲಿ ದಪ್ಪು ಹಿಡಿದು ಬಾರಿಸಿದರೇ ಅದರ ಗತ್ತು ಬ್ಯಾರೆ ಇರತಿತ್ತು ಫಕ್ಕೀರವ್ವ ಕಾವ್ಯ ಪದಗಳನ್ನು ಸೂರುಬದ್ದವಾಗಿ ರಾಗಬದ್ದವಾಗಿ ಶಕ್ತಿಯನ್ನು ಹೆಚ್ಚು ಮಾಡಿ ಹಾಡುವಾಗ ಕೇಳುಗರನ್ನ ಬೆರಗುಗೊಳಿಸಿ ರಾತ್ರಿಯಲ್ಲಾ ಜನರಿಗೆ ಮನರಂಜನೆ ನೀಡುತ್ತಿದ್ದರು ವಿಶೇಷವಾಗಿ ಹಬ್ಬ ಹರಿದಿನಗಳಲ್ಲಿ ಜಾತ್ರೆಗಳಲ್ಲಿ ಇವರನ್ನು ಹರದೇಶಿ ಮತ್ತು ನಾಗೇಶಿ ತಂಡಗಳಾಗಿ ಕರಿಸಿ ಹಾಡುಗಳನ್ನು ಕೇಳಿ ಸನ್ಮಾನಿಸುತ್ತಿದ್ದರು ಇವತ್ತು ಫಕ್ಕೀರವ್ವ ಗುಡಿಸಾಗರ ಚಿಂತನ ಕಾರ್ಯಕ್ರಮದಲ್ಲಿ ನನ್ನನ್ನು ಕರಿಸಿ ಸನ್ಮಾನಿಸಿದಕ್ಕಾಗಿ ನನಗೆ ಸಂತಸ ತಂದಿದೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ.ಕೆ ಆರ್ ದುರ್ಗಾದಾಸ ಮಾತನಾಡಿದರು. 

ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಜಾನಪದ ಕಲೆಗಳು ನಶಿಸಿ ಹೋಗುತ್ತಿದ್ದು ಅಂತಹ ಕಲೆಗಳನ್ನು ಜಾನಪದ ಸಂಸ್ಥೆ ಕಟ್ಟಿಕೊಂಡು ಹಲವಾರು ಜಾನಪದ ಕಲಾ ತಂಡಗಳಿಗೆ ವೇದಿಕೆ ಕಲ್ಪಿಸಿ ಕೊಡುವಲ್ಲಿ ಯಕ್ಕೇರ​‍್ಪ ನಡುವಿನಮನಿ ಇವರ ಕಾರ್ಯ ಶ್ಲಾಘನೀಯ ಎಂದು  ರಾಜ್ಯ ಪ್ರಶಸ್ತಿ ವಜೇತೆ ಫಕ್ಕೀರವ್ವ ಗುಡಿಸಾಗರ ಜಾನಪದ ಕಲಾವಿದರ ಅಭಿವೃದ್ಧಿ ಸಂಘ ಧಾರವಾಡ ಸಾಹಿತ್ಯ ಪರಿಷತ್ತು ಸಬಾಭವನದಲ್ಲಿ ಏರಿ​‍್ಡಸಿದ ಚಿಂತನ ಕಾರ್ಯಕ್ರಮವನ್ನು ಕೃಷ್ಣಾ ಕೊಳ್ಳಾನಟ್ಟಿ ಉದ್ಘಾಟಿಸಿ ಮಾತನಾಡಿದರು. 

ಅತಿಥಿಯಾಗಿ ಆಗಮಿಸಿದ ವೀರಭದ್ರ​‍್ಪ ಹಾಲಹರವಿಯವರು ಜನಪದ ಮತ್ತು ಫಕ್ಕೀರವ್ವ ಗುಡಿಸಾಗರವರ ಬಗ್ಗೆ  ಡಾ. ಕೆ ಆರ್ ದುರ್ಗಾದಾಸ ಅವರ ಬಗ್ಗೆ ಸ್ವ ವಿಸ್ತಾರವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿ. ಎಮ್‌. ಚನ್ನಬಸಪ್ಪ, ಕೆ ಎಚ್ ಚನ್ನೂರ, ಶಿವಣ್ಣ ಚಿಕ್ಕಣ್ಣವರ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್, ಎನ್ ಬಿದರಳ್ಳಿ ವಹಿಸಿದ್ದರು, ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರೆ​‍್ಣಯನ್ನು ಸಂಘದ ಅಧ್ಯಕ್ಷರಾದ ಯಕ್ಕೇರ​‍್ಪ ನಡುವಿನಮನಿ ನಡೆಸಿಕೊಟ್ಟರು. 


ಸುದ್ದಿ ಓದಿ