ಶಿಗ್ಗಾವ್

ಜಾತ್ರೆಗಳು ಮನುಷ್ಯರಲ್ಲಿ ಧಾನ ಧರ್ಮದ ಜಾಗೃತಿಯನ್ನು ಮೂಡಿಸುತ್ತವೆ: ಡಾ.ಎ.ಸಿ.ವಾಲಿ

ಜಾತ್ರೆಗಳು ಮನುಷ್ಯರಲ್ಲಿ ಧಾನ ಧರ್ಮದ ಜಾಗೃತಿಯನ್ನು ಮೂಡಿಸುತ್ತವೆ: ಡಾ.ಎ.ಸಿ.ವಾಲಿ

ಶಿಗ್ಗಾವಿ 10: ಜಾತ್ರೆಗಳು ಮನುಷ್ಯರಲ್ಲಿ ಧಾನ ಧರ್ಮದ ಜಾಗ್ರತಿಯನ್ನು ಮೂಡಿಸುತ್ತವೆ ಮನುಷ್ಯರು ಯಾವತ್ತೂ ಬೇಡುವವರಾಗಬಾರದು ನೀಡುವವರು ಕೂಡಾ ಆಗಬೇಕು ಎಂದು ಡಾ.ಎ.ಸಿ.ವಾಲಿ ಮಹಾರಾಜರು ಹೇಳಿದರು. 

ತಾಲೂಕಿನ ಕುನ್ನೂರ ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮ ದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು ಕುನ್ನೂರ ಗ್ರಾಮದಲ್ಲಿ ಇಂದು ಎಲ್ಲ ಹಿರಿಯರು ಸೇರಿ ದೇವಿ ಜಾತ್ರಿ ಅದ್ದೂರಿಯಾಗಿ ಮಾಡುತ್ತಿರುವುದು ಸಂತೋಷದ ವಿಚಾರ ಅದರ ಜೊತೆಗೆ ನಮ್ಮ ಹಡೆದವ್ವಳನ್ನು ಚೆನ್ನಾಗಿ ನೋಡಿಕೊಂಡರೆ ಧ್ಯಾಮವ್ವ ಕೂಡಾ ನಮ್ಮ ಮನೆಗೆ ಬರುತ್ತಾಳೆ ಹಾಗಾಗಿ ಜಾತ್ರೆಯ ಜೊತೆಗೆ ಇಂದು ನಮ್ಮ ತಂದೆ ತಾಯಿಯನ್ನು ಪೂಜಿಸಿ ಗೌರವದಿಂದ ಕಾಣಬೇಕು ಹಾಗೆಯೇ ಜಾತ್ರೆಗಳು ಸೌಹಾರ್ಧತೆಯ ಸಂಕೇತವಾಗಬೇಕು ಅನೇಕು ಸಂತ ಶರಣರು ಕೂಡಾ ಅದನ್ನೆ ಪ್ರತಿಪಾದನೆ ಮಾಡಿದರು ಜಾತ್ರೆಗಳು ಹಂಚಿಕೊಂಡು ತಿನ್ನುವುದನ್ನು ಕಲಿಸಬೇಕು ಯಾವತ್ತೂ ಬೇಡುವ ಕೈಗಳಾಗಬಾರದು ಶರಣರ ವಾಣಿಯಂತೆ ಸಿರಿ ಬಂದ ಕಾಲಕ್ಕೆ ಕರೆದು ದಾನ ಮಾಡಿದರೆ ನಮಗೆ ಮುಂದೆ ಇನ್ನೂ ಸಿರಿ ಸಂಪತ್ತು ಎತೆಚ್ಚವಾಗಿ ಸಿಗುತ್ತದೆ. 

ಇಂದು ನಮ್ಮ ನಡುವೆ ಅಕ್ಕ ತಂಗಿ ಸಹೋದರಿ ಸಹೋದರರ ಸಂಬಂಧ ಕಡೆದು ಹೋಗುತ್ತಿವೆ ಇಂತಹ ಜಾತ್ರೆಗಳು ಸಹೋದರ ಬಾಂಧವ್ಯವನ್ನು ಕೂಡಿಸುವಂತಿರಬೇಕು ಹಾಗಾಗಿ ಗ್ರಾಮದೇವಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದರು. 

ಕಾರ್ಯಕ್ರಮದ ಸಮ್ಮುಖವನ್ನು ಸೋಮಯ್ಯನವರ ಹಿರೇಮಠ, ಕಾರ್ಯಕ್ರಮದ ಉದ್ಘಾಟನೆಯನ್ನು ಶ್ಯಾಡಂಬಿಯ ಲ್ಯಾಂಡ್ ಲಾರ್ಡ ವರುಣಗೌಡ ಪಾಟೀಲ ನೇರವೆರಿಸಿದರು. 

ಸದಾನಂದ ನೆಲ್ಲಿಕೋಪ್ಪ, ಗ್ರಾ.ಪಂ ಉಪಾಧ್ಯಕ್ಷೆ ಶ್ರೀಕಾಂತೆವ್ವ ಮೋರಭದ, ಅಂಬ್ರಮ್ಮಾ ಕಲ್ಲೂರ, ಕಲಾವಿದ ಚಂದ್ರು ಚಿತ್ರಗಾರ, ರಾಮಣ್ಣಾ ಹುಲ್ಲೂರ, ಬಸನಗೌಡ ಪಾಟೀಲ, ವಾಸೂದೇವ ಬಡಿಗೇರ, ಭೀಮಣ್ಣಾ ಬಾರ್ಕಿ, ಮಮ್ಮಧಸಾಬ ಮತ್ತೇಖಾನ, ನಾಗಪ್ಪ ಲಂಗೂಟಿ, ವಿಠಲ್ ದುಂಡಪ್ಪನವರ, ಚಂದ್ರಶೇಖರ ಕಲ್ಲೂರ, ಯಮನಪ್ಪ ಗುಂಡಪ್ಪನವರ, ಗಣಪತಿ ಓಲೇಕಾರ, ಅಬ್ದುಗೌಸ್ ಜಮಖಂಡಿ, ಮೈಲಾರೇಪ್ಪ ಇಂದೂರ, ಸೇರಿದಂತೆ ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮ ಹೇಮಾ ಮಾಳೋಜನವರ ಸ್ವಾಗತಿಸಿದರು. ನಿರುಪಣೆಯನ್ನು ಪಕ್ಕೀರೇಶ ಕೋಟಗಾರ ವಹಿಸಿದರು. 


ಸುದ್ದಿ ಓದಿ