ಗೋಕಾಕ್

ಉಪ ಕಾರ್ಯದರ್ಶಿಯಾಗಿ ಮುಂಬಡ್ತಿ ಹೊಂದಿದ ಬಸವರಾಜ ಹೆಗ್ಗನಾಯಕಗೆ ಸತ್ಕಾರ

ಉಪ ಕಾರ್ಯದರ್ಶಿಯಾಗಿ ಮುಂಬಡ್ತಿ ಹೊಂದಿದ ಬಸವರಾಜ ಹೆಗ್ಗನಾಯಕಗೆ ಸತ್ಕಾರ
ಬೆಳಗಾವಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿಯಾಗಿ ಮುಂಬಡ್ತಿಯಾದ ಬಸವರಾಜ ಹೆಗ್ಗನಾಯಕ ಅವರನ್ನು ಗ್ರಾ.ಪಂ.ನೌಕರರ ಸಂಘದ ವತಿ

ಗೋಕಾಕ 28 : ಗೋಕಾಕ ಹಾಗೂ ಮೂಡಲಗಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ ಹೆಗ್ಗನಾಯಕ ಅವರು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ (ಅಭಿವೃದ್ದಿ)ಯಾಗಿ ಬಡ್ತಿ ಹೊಂದಿದ ಪ್ರಯುಕ್ತ ಗ್ರಾಮ ಪಂಚಾಯತ ನೌಕರರ ಸಂಘದ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು.

ಕಾರ್ಯನಿರ್ವಾಹಕ ಹುದ್ದೆಯಿಂದ ಬೆಳಗಾವಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ನೀಡಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತರಾಜ್ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶೀಗಳಾದ ಟಿ.ಡಿ.ನಾಗೇಂದ್ರ ಅವರು ದಿ.26 ರಂದು ಆದೇಶ ಮಾಡಿದ್ದ ಪ್ರಯುಕ್ರ ಶನಿವಾರದಂದು ನಗರದ ತಾಲೂಕಾ ಪಂಚಾಯತ ಸಬಾ ಭವನದಲ್ಲಿ ಗೋಕಾಕ ಹಾಗೂ ಮೂಡಲಗಿ ತಾಲೂಕಾ ಗ್ರಾಮ ಪಂಚಾಯತ ನೌಕರರ ಸಂಘದ ಪದಾಧಿಕಾರಿಗಳು ಸೇರಿ ಹಾರ್ಧಿಕವಾಗಿ ಸತ್ಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯತ ನೌಕರರ ಸಂಘದ ತಾಲೂಕಾಧ್ಯಕ್ಷ ಮಡ್ಡೆಪ್ಪ ಭಜಂತ್ರಿ ಅವರು ಗ್ರಾಮ ಪಂಚಾಯತಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಪ್ರಮುಖ ಬೇಡಿಕೆಗಳಾದ ಅನುಮೋದನೆ, ಪುರ್ವಾನುಮೋದನೆ. ಹಾಗೂ ಬಡ್ತಿ ನೀಡುವ ವಿಷಯಗಳು ಬಾಕಿ ಉಳಿದಿದ್ದು ಸಿಬ್ಬಂದಿಗಳ ಎಲ್ಲ ಬೇಡಿಕೆಗಳನ್ನು ಕೂಡಲೇ ಪರಿಹರಿಸಿ ಸಿಬ್ಬಂದಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಗೋಕಾಕ ತಾಲೂಕಾ ಗ್ರಾ.ಪಂ. ನೌಕರರ ಸಂಘದ ಪ್ರ.ಕಾರ್ಯದರ್ಶಿ ಕಲ್ಲಪ್ಪ ಮಾದರ, ಕರೀಮಸಾಬ ಬಾಗವಾನ, ಸುನೀಲ ಯಡವನ್ನವರ, ಲಕ್ಷ್ಮಣ ಬಾಲಯಗೋಳ,ವಿಜಯ ಸೋಲ್ಲಾಪೂರ, ಧರೆಪ್ಪ ಬೆಳವಿ, ಮೂಡಲಗಿ ತಾಲೂಕಾ ಗ್ರಾ.ಪಂ. ನೌಕರರ ಸಂಘದ ಅಧ್ಯಕ್ಷ ರಮೇಶ ಹೋಳಿ, ಬಸವರಾಜ ರೊಡ್ಡನವರ, ವಿಠ್ಠಲ ಕಂಬಳಿ, ರವಿ ಬಿಳ್ಳೂರ ಸೇರಿದಂತೆ ಇನ್ನೂಳಿದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿ ಓದಿ