ರಾಣೆಬೆನ್ನೂರ

ಕಣ್ಣು ಮನುಷ್ಯನ ಪ್ರಮುಖ ಅಂಗ: ಆರ್ ಶಂಕರ್

ಕಣ್ಣು ಮನುಷ್ಯನ ಪ್ರಮುಖ ಅಂಗ: ಆರ್ ಶಂಕರ್

ರಾಣೇಬೆನ್ನೂರು 18:  ಎಲ್ಲ ಅಂಗಗಳಿಗಿಂತಲೂ ಕಣ್ಣು ಪ್ರತಿಯೊಬ್ಬ ಮನುಷ್ಯನಿಗೂ ಪ್ರಮುಖ ಅಂಗವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್ ಶಂಕರ್ ಹೇಳಿದರು. ಅವರು ಇಲ್ಲಿನ ಮೆಡ್ಲೇರಿ  ರಸ್ತೆಯ ಲಯನ್ಸ್‌ ಶಾಲಾ ಸಭಾಭವನದಲ್ಲಿ ಶ್ರೀ ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್‌, ಶಿವಮೊಗ್ಗ ಶಂಕರ್ ಕಣ್ಣಿನ ಆಸ್ಪತ್ರೆ ಸ್ವಾಕರವೇ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂದತ್ವ ನಿವಾರಣ ಸಂಸ್ಥೆ ಲಯನ್ಸ್‌ ಸಂಸ್ಥೆ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣೆ ಹಾಗೂ ಕಣ್ಣಿನ ಪೊರೆ ಚಿಕಿತ್ಸಾ  ಶಿಬಿರ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಇದ್ದವರು ಇಲ್ಲದವರು ಸಹ, ಪ್ರಮುಖವಾಗಿರುವ  ಈ ಅಂಗವು. ಮೇಲಿಂದ ಮೇಲೆ ತಪಾಸಣೆಗೊಳಪಟ್ಟು ಕಣ್ಣಿನ ರಕ್ಷಣೆ ಮಾಡಿಕೊಳ್ಳುವುದು ಇಂದಿನ ಅಗತ್ಯವಿದೆ ಎಂದರು. ಲಯನ್ ಸೇವಾ ಸಂಸ್ಥೆಯ ಅಧ್ಯಕ್ಷ ಮಹೇಶ್ ಅಡಿವೆಪ್ಪನವರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಎಂ. ಜಿ. ಇ.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಲ್ಲೇಶಪ್ಪ ಅರಕೇರಿ, ಮಾಜಿ ಅಧ್ಯಕ್ಷರಾದ ಬಸವರಾಜ ಬಡಿಗೇರಿ​‍್ಟ.ವೀರಣ್ಣ, ಎಲ್‌.ಜಿ.ಶೆಟ್ಟರ್, ಪ್ರಭುಲಿಂಗಪ್ಪ ಹಲಗೇರಿ, ಆರೋಗ್ಯ ನೀರೀಕ್ಷಕ ಜೆ. ಎಮ್‌. ರಾಜಶೇಖರ್, ಬಸವರಾಜ ಪಾಟೀಲ್ , ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮಿ, ಪ್ರಕಾಶ, ಗುತ್ಯಪ್ಪ ಹಳೆಮನಿ, ವಿಕ್ರಂ ಸಣ್ಣಮನಿ, ಸೇರಿದಂತೆ ಮತ್ತಿತರೇ ಪದಾಧಿಕಾರಿಗಳು, ಗಣ್ಯರು, ವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿದ್ದರು. ಉಮಾ ಮುದಗಲ್ ಮಠ ಪ್ರಾರ್ಥಿಸಿದರು, ಇಂದಿರಾ ಕೊಪ್ಪದ ಸ್ವಾಗತಿಸಿರು, ಆರ್ ವಿ ಸೊರಗೊಂಡ ನಿರೂಪಿಸಿ, ಎಮ್‌. ಎಚ್‌. ಪಾಟೀಲ್ ವಂದಿಸಿದರು. ಶಿಬಿರದಲ್ಲಿ 350ಕ್ಕೂ ಹೆಚ್ಚು ನಾಗರಿಕರು ತಪಾಸಣೆಗೊಳಪಟ್ಟು 150ಕ್ಕೂ ಹೆಚ್ಚು ಶಿಬಿರಾರ್ಥಿಗಳು ಚಿಕಿತ್ಸಾ ಶಿಬಿರಕ್ಕೆ ಆಯ್ಕೆಗೊಂಡರು 


ಸುದ್ದಿ ಓದಿ