ನೇತ್ರದಾನದ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ: ಕುಂದಾಪುರ
ರಾಣಿಬೆನ್ನೂರ 14: ಅಸಹಜ ಸಾವಿನ ಅನಂತರ ತಮ್ಮ ನೇತ್ರಗಳನ್ನು ಸ್ವಯಂ ಪ್ರೇರಿತರಾಗಿ ದಾನ ಮಾಡುವುದರಿಂದ ಹತ್ತಾರು ನೇತ್ರ ಸಮಸ್ಯೆಗಳ ಜನರಿಗೆ ಅನುಕೂಲವಾಗುವುದು ಎಂದು ಸ್ವಾಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಹೇಳಿದರು.
ತಾಲೂಕಿನ ಹಲಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಂಕರ್ ಕಣ್ಣಿನ ಆಸ್ಪತ್ರೆ, ಸ್ವಾಕರವೇ, ಎನ್ಎಸ್ ಸ್ನೇಹ ಜ್ಯೋತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಇವುಗಳ ಆಶ್ರಯದಲ್ಲಿ ಏರಿ್ಡಸಿದ್ದ ಉಚಿತ ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಸಾವಿನ ನಂತರ ಬಹಳಷ್ಟು ಜನರ ಕಣ್ಣುಗಳು ಮಣ್ಣಿನ ಪಾಲಾಗುತ್ತಿವೆ. ಇದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಸಂಘ ಸಂಸ್ಥೆಗಳಿಂದ ಆಗಬೇಕಾಗಿದೆ ಎಂದರು.
ಶಿಬಿರದಲ್ಲಿ 130ಕ್ಕೂ ಅಧಿಕ ಜನರ ನೇತ್ರಗಳನ್ನು ತಪಾಸಿಸಲಾಯಿತು. 25 ಜನರು ಶಸ್ತ್ರಚಿಕಿತ್ಸೆಗೆ ಆಯ್ಕೆಯಾದರು. ಡಾ. ಅನುರಾಧ ಕುಲಕರ್ಣಿ, ಜೆಸಿಐ ಅಧ್ಯಕ್ಷ ಪ್ರಕಾಶ್ ಗಚ್ಚಿನಮಠ, ಶಿವಶಂಕರ್ ಕೆ, ಶಿವಕುಮಾರ ಜಾಧವ, ಡಾ. ಮಲ್ಲಿಕಾರ್ಜುನ, ಡಾ. ವೈಷ್ಣವಿ ಮಹಾಜನ, ರವಿ ಕುಂದಾಪುರ, ಸಿದ್ಧಾರೂಢ ಗುರುಂ, ಪರಮೇಶಪ್ಪ ಹಲಗೇರಿ, ಪಾಲಾಕ್ಷಪ್ಪ ಕಡೆಮನಿ, ಸಂಜೀವ್ ಕನವಳ್ಳಿ, ಕುಮಾರ ನಂದಿತಾವರೆ, ಸಂತೋಷ್ ಕನ್ನಪ್ಪಳವರ, ಮಂಜು ಕುಡುಪಲಿ, ಪ್ರಕಾಶ್ ದಾನಪ್ಪನವರ, ಪ್ರಕಾಶ್ ಕುಂಬಾರ ಇದ್ದರು.