ಸೋಪ್ಪಡ್ಲದಲ್ಲಿ ಕಣ್ಣಿನ ತಪಾಸಣಾ ಶಿಬಿರ: ವನಮೋತ್ಸವ
ಯರಗಟ್ಟಿ :26 ಶರೀರದ ಎಲ್ಲ ಅಂಗಗಳಲ್ಲಿ ಮುಖ್ಯವಾದದ್ದು ಕಣ್ಣು ಅದನ್ನು ಅಲಕ್ಷಿಸದೇ ಬಹಳಷ್ಟು ಕಾಳಜಿವಹಿಸಬೇಕು. ವಯಸ್ಸಾದಂತೆ ಕಣ್ಣಿಗೆ ಪರಿ ಬರುವದು, ಕುಣಿಕೆ ಹುಣ್ಣು, ನೀರು ಬರುವದು ಮುಂತಾದವು ಸಹಜ. ಅಂತಹವು ಸಂಭವಿಸಿದಲ್ಲಿ ವೈದ್ಯರನ್ನು ಕಂಡು ಪರಿಹಾರ ಮಾಡಿಕೊಳ್ಳಬೇಕು ಎಂದು ಕಣ್ಣಿನ ತಜ್ಞ ಡಾ. ಆನಂದ ತುಪ್ಪದ ಹೇಳಿದರು.
ಸಮೀಪದ ಸೊಪ್ಪಡ್ಲ ಗ್ರಾಮದಲ್ಲಿ ಸೋಮವಾರ ದಿ.25 ರಂದು ಧಾರವಾಡ ಐ.ಡಿ.ಎಪ್. ಸ್ವ ಸಹಾಯ ಸಂಘಗಳ ಒಕ್ಕೂಟ ಮತ್ತು ಬೆಳಗಾವಿಯ ನಂದಾದೀಪ ಕಣ್ಣಿನ ಆಸ್ಪತ್ರೆ ಇವರ ಸಹಯೊಗದೊಂದಿಗೆ ಏರಿ್ಡಸಲಾಗಿದ್ದ ಉಚಿತ ತಪಾಸಣೆ ಮತ್ತು ಪರಿಸರ ನಿಮಿತ್ಯ ವನಮೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಮ್ಮ ನಂದಾದೀಪ ಕಣ್ಣಿನ ಆಸ್ಪತ್ರೆಯಲ್ಲಿ ಇಂತಹ ಕ್ಯಾಂಪದಲ್ಲಿ ತಾವು ತಪಾಸಣೆ ಮಾಡಿದ ಎಲ್ಲರಿಗೂ ಶೇ 50. ರಷ್ಟು ಕಡಿಮೆ ವೆಚ್ಚದಲ್ಲಿ ಗುಣಪಡಿಸುತ್ತೆವೆ ಎಂದರು.
ಐ.ಡಿ.ಎಪ್. ಮುಖ್ಯಸ್ಥ ಎಸ್.ಎಸ್.ಬಾವಕರ ಮಾತನಾಡಿ ತಮ್ಮ ಸಂಸ್ಥೆ ಕೇವಲ ಹಣಕಾಸಿನ ವ್ಯವಹಾರ ಮಾಡದೇ ಸಮಾಜಿಕ ಕಳಕಳಿ ಹೊಂದಿದೆ. ಮಹಿಳೆಯರ, ಮಕ್ಕಳ ಮತ್ತು ವೃದ್ಧರ ಆರೋಗ್ಯ, ಮತ್ತು ಪರಿಸರ ಮಾಲಿನ್ಯ ಮುಂತಾದ ಸಾಮಾಜಿಕ ಕೆಲಸಗಳನ್ನು ಸಕಾಲಕ್ಕೆ ಮಾಡುತ್ತಾ ಬಂದಿದೆ ಎಂದರು. ಅವರು ವನಮೋತ್ಸವ ಮಾಡಿ ಕಾರ್ಯಕ್ರಮಕ್ಕೆ ಬಂದಿದ್ದ ಪ್ರತಿಯೊಬ್ಬರಿಗೂ ಒಂದೊಂದು ಸಸಿ ಕೊಟ್ಟು ಅದನ್ನು ತಮ್ಮ ಮನೆಯ ಮಗನಂತೆ ಕಾಪಾಡಬೇಕು. ಮನೆಗೆ ಒಂದು ಮರ ಊರಿಗೆ ಒಂದು ವನ ಎಂದು ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮವನ್ನು ಗ್ರಾ.ಪಂ.ಅದ್ಯಕ್ಷೆ ಸುವರ್ಣಾ ಹೊಸಮಠ ಜ್ಯೋತಿ ಬೆಳಗಿಸುವದರೊಂದಿಗೆ ಉದ್ಘಾಟಿಸಿದರು. ವೈದ್ಯಕಿಯ ಸಿಬ್ಬಂದಿ ಹಾಯತಬಾಶಾ ಗುದಗಿ, ಫಾರ್ಥ ಸಿಲ್, ಜೈಬಿಕ್ರಮ ಶಾ, ಪೂಜಾ ಪಾಟೀಲ. ಐ.ಡಿ.ಎಪ್. ಸಿಬ್ಬಂದಿ ಮಾಂತೇಶ ದಾಸನಾಳ, ಶಾಮರಾವ ಕೂಟಕರ, ಶಾಹಿರಾ ನದಾಪ, ಗ್ರಾ.ಪಂ.ಸದಸ್ಯರಾದ ಸತ್ಯವ್ವಾ ಗೊರಗುದ್ದಿ, ಯಲ್ಲವ್ವಾ ಮಾದರ, ಬಸಯ್ಯ ಹಿರೇಮಠ, ಮತ್ತು ಶೇಖರ ಹಳ್ಳಿ, ಹನಮಂತ ಹೊಂಗಲ, ಸೋಮಪ್ಪಾ ಕೊಡ್ಲಿ, ಮುಂತಾದವರು ಇದ್ದರು.