ಶಾಂತಿ ಸರೋಜಿ ನೇತ್ರಾಲಯದಿಂದ ನೇತ್ರ ತಪಾಸಣೆ
ಲೋಕದರ್ಶನ ವರದಿ
ಕಾಗವಾಡ 17: ಮನುಷ್ಯನ ಪ್ರತಿಯೊಂದು ಅಂಗಗಳಲ್ಲಿ ನೇತ್ರ ಅತಿ ಮಹತ್ವದ್ದಾಗಿದೆ ನೇತ್ರದ ರಕ್ಷಣೆ ಮಾಡಿಕೊಳ್ಳುವುದಾದರೆ ಆಹಾರದಲ್ಲಿ ಮೊಳಕೆಕಾಳು, ಹಸಿರು ಪಲ್ಲೆ ಬಳಸುವುದರೊಂದಿಗೆ ಸತತವಾಗಿ ಮೊಬೈಲ್, ಕಂಪ್ಯೂಟರ್ ಬಳಕೆ ಮಿತಿಯಲ್ಲಿರಬೇಕು ಎಂದು ಮಿರಜದ ಶಾಂತಿ ಸರೋಜ್ ನೇತ್ರಾಲಯದ ಖ್ಯಾತ ತಜ್ಞರಾದ ಡಾ. ಪೂಜಾ ಭೊಮಾಜ ಹೇಳಿದರು.
ಕಾಗವಾಡದಲ್ಲಿ ಶಾಂತಿ ಸರೋಜಿ ನೇತ್ರಾಲಯದ ವತಿಯಿಂದ ನೇತ್ರ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದರು. ಶಿಬಿರ ಉದ್ದೇಶಿಸಿ ಡಾಕ್ಟರ್ ಪೂಜಾ ಭೊಮಾಜ ಮಾತನಾಡಿದರು.
ಸನ್ 2016 ರಿಂದ ಇವರೆಗೆ 6600 ಜನರ ಕಾಗವಾಡದಲ್ಲಿ ಕಣ್ಣು ತಪಾಸಣೆ ಮಾಡಲಾಗಿದೆ, ಅದರಲ್ಲಿ ಸುಮಾರು 2,000 ಜನರ ಮೊತಿಬಿಂದು ಇನ್ನಿತರ ಶಾಸ್ತ್ರ ಕ್ರಿಯೆಗಳು ಸುಸಜ್ಜಿತ ಮಿರಜದ ಶಾಂತಿ ಸರೋಜ್ ನೇತ್ರಾಲಯದಲ್ಲಿ ಮಾಡಲಾಗಿದೆ ಎಂದರು.
ಡಾ. ಶರತ್ ಬೊಮಾಸ್ ಹಾಗೂ ಡಾ. ಪೂಜಾ ಭೊಮಾಜ್ ಇಬ್ಬರೂ ನೇತೃ ತಜ್ಞರು ನಿರಂತರವಾಗಿ ಕರ್ನಾಟಕದ ಜನರ ಸಮಸ್ಯೆಗಳನ್ನು ಆಲಿಸಿ, ಅವರಿಗೆ ಸಹಕಾರ ನೀಡುವ ಭಾವನೆಯಿಂದ ಕಾಗವಾಡದಲ್ಲಿ ಇದು ಒಂದು ಶಾಖೆ ರೂಪದಲ್ಲಿ ಸೇವೆ ನೀಡುತ್ತಿದ್ದಾರೆ. ಅವರ ಸೇವೆ ಇಲ್ಲಿಯ ಹಿರಿಯರು ಕೊಂಡ್ಯಾಡುತ್ತಿದ್ದಾರೆ. ಅವರಿಗೆ ಅವರ ಸಹಾಯಕಿ ಸಂಗೀತ ಶೆಟ್ಟಿ ಇವರ ವಿಶೇಷ ಸಹಕಾರ ದೊರೆತಿದೆ.