ವಿಸ್ತಾರಕರ ಕಾರ್ಯಗಾರ ಸಭೆ
ಇಂಡಿ: ಜಗತ್ತಿನ ಅತಿ ದೊಡ್ಡ ಪಾರ್ಟಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ತಾವು ದೇಶದ ಸರ್ವತೋಮುಖಿ ಅಭಿವೃದ್ಧಿ ಕಡೆ ಚಿಂತನೆಯನ್ನು ಮಾಡುವ ಮೂಲಕ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಯನ್ನು ಚಿಂತನೆ ಮಾಡೋ ಕಾರ್ಯಕರ್ತರು ನಾವು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರುದ್ರ ಬಾಗಲಕೋಟ್ ಹೇಳಿದರು.
ಅವರು ಭಾನುವಾರ ಪಟ್ಟಣದ ಬಾಬು ಜಗಜೀವನರಾಮ್ ಭವನದಲ್ಲಿ ವಿಸ್ತಾರಕರ ಕಾರ್ಯಗಾರ ಸಭೆಯಲ್ಲಿ ಮಾತನಾಡಿದರು.
ದೇಶದ ಪ್ರಧಾನ ಸೇವಕ ನಮೋ ಅವರು ಕೇಲಸನ್ನು ನೋಡಿ ವಿರುದ್ಧ ಪಕ್ಷದ ನಾಯಕರು ದಿಗ್ಭ್ರಮೆಯಾಗಿದ್ದಾರೆ. ಮುಂಬರುವ ದಿನಗಳಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕಾ ಪಂಚಾಯತ್ ಹಾಗೂ ವಿಧಾನಸಭಾ ಚುನಾವಣೆ ಎದುರಿಸಲು ಭೂತಮಟ್ಟ ಶಕ್ತಿ ಕೇಂದ್ರಗಳು ಗಟ್ಟಿಗೊಳ್ಳಿಸಬೇಕು ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುದೆ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಬಿಜೆಪಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ರಾಜಕುಮಾರ ಸಗಾಯಿ, ಅನಿಲ ಜಮಾದಾರ, ಎಸ್.ಎ. ಪಾಟೀಲ ಮಾತನಾಡಿದರು.
ವೇದಿಕೆಯಲ್ಲಿ ಅನೀಲಗೌಡ ಬಿರಾದಾರ, ಇಸ್ಮಾಯಿಲ್ ಅರಬ, ಬುದ್ದುಗೌಡ ಪಾಟೀಲ, ಪುಟ್ಟಣಗೌಡ ಪಾಟೀಲ, ರಾಜು ಕಾಡೆ, ಶ್ರೀಮಂತ ಮೋಗಲಾಯಿ, ಶಾಂತು ಕಂಬಾರ, ಮಲ್ಲು ವಾಲಿಕಾರ, ಶಿವಯೋಗಿ ರೂಗಿಮಠ, ಶ್ರೀನಿವಾಸ್ ಕಂದಗಲ್ಲ, ಅಣ್ಣು ಮದರಿ, ಜಟ್ಟು ಮರಡಿ, ರಮೇಶ ಧರೇನವರ, ಗೌಡಪ್ಪಗೌಡ ಬಿರಾದಾರ, ಸಂಜು ದಶವಂತ, ರಾಜಶೇಖರ ಯರಗಲ್, ಕಾಶಿನಾಥ ನಾಯ್ಕೋಡಿ, ಅದೃಶ್ಯಪ್ಪ ವಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗಾನಕೋಗಿಲೆ ಲತಾ ಮಂಗೇಶ್ಕರ್ ಶ್ರದ್ಧಾಂಜಲಿ ಸಲ್ಲಿಸಿದರು.