ಮನರಂಜನೆ

ಡ್ರಗ್ಸ್ ಜಾಲದಲ್ಲಿ ಸ್ಯಾಂಡಲ್ ವುಡ್ ನಟ, ನಟಿಯರು: ಸ್ಪೋಟಕ ಮಾಹಿತಿ ಬಹಿರಂಗ

ಡ್ರಗ್ಸ್ ಜಾಲದಲ್ಲಿ ಸ್ಯಾಂಡಲ್ ವುಡ್ ನಟ, ನಟಿಯರು: ಸ್ಪೋಟಕ ಮಾಹಿತಿ ಬಹಿರಂಗ

ಬೆಂಗಳೂರು, ಆಗುಸ್ಟ್ 29: ಡ್ರಗ್ಸ್ ಜಾಲದಲ್ಲಿ ದಕ್ಷಿಣ ಭಾರತದ ನಟ ನಟಿಯರಷ್ಟೇ ಅಲ್ಲದೇ ಸ್ಯಾಂಡಲ್ ವುಡ್ ನ ನಟ, ನಿರ್ದೇಶಕರು ಸಹ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ಮಾದಕ ವಸ್ತು ನಿಗ್ರಹದಳದ ಪೊಲೀಸರು, ದಂಧೆ ನಡೆಸುತ್ತಿದ್ದ ಆರೋಪಿಗಳಿಂದ ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ. ಕನ್ನಡ ಚಿತ್ರರಂಗದ ಹಲವಾರು ಸ್ಟಾರ್ ನಟ, ನಟಿಯರು, ನಿರ್ದೇಶಕರಿಗೂ ಸಹ ಡ್ರಗ್ಸ್ ಪೂರೈಕೆಯಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಬೇರೆ ಕಡೆಯಿಂದ ತರಿಸುತ್ತಿದ್ದ ಮಾದಕ ಮಾತ್ರೆಗಳನ್ನು ನಿರ್ದಿಷ್ಟ ಗ್ರಾಹಕರಿಗೆ ಮುಟ್ಟಿಸುವ ಕೆಲಸವನ್ನು ಆರೋಪಿಗಳು ಮಾಡುತ್ತಿದ್ದ. ಅನುಮಾನ ಬಾರದಿರಲಿ ಎಂದು ನಟ..ನಿರ್ದೇಶಕರಿಗೆ ಹೂ ಗುಚ್ಚ ಇಲ್ಲವೇ ಗಿಫ್ಟ್ ಪ್ಯಾಕ್ ನಲ್ಲಿ ಮಾತ್ರೆಗಳನ್ನು ಇರಿಸಿಕೊಡುತ್ತಿದ್ದ. ಒಂದು ಮಾದಕ ಮಾತ್ರೆಯ ಬೆಲೆ 4 ಸಾವಿರ ರೂ ದಿಂದ..ಆರು ಸಾವಿರ ರೂ ಎನ್ನಲಾಗಿದೆ.

ಕಲ್ಯಾಣ ನಗರದ ರಾಯಲ್ ಸೂಟ್ಸ್ ಹೊಟೆಲ್ ಅಪಾರ್ಟ್ ಮೆಂಟ್ ನಲ್ಲಿ ಹಿರಿಯ ಅಧಕಾರಿಗಳು ದಾಳಿನಡೆಸಿ ವಶಪಡಿಸಿಕೊಂಡಿರುವ ೧೪೫ ಮಾದಕ ಮಾತ್ರೆಗಳ ಮೌಲ್ಯ ಕೋಟ್ಯಂತರ ರೂ ಎನ್ನಲಾಗಿದೆ.

ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲೂ ಈ ಜಾಲ ವ್ಯಾಪಕವಾಗಿ ಹರಡಿದ್ದು, ರಾಜ್ಯದಲ್ಲೂ ಸಹ ನಟನಟಿಯರನ್ನು ವಿಚಾರಣೆಗೆ ಒಳಪಡಿಸಲು ಉದ್ದೇಶಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಸುದ್ದಿ ಓದಿ