ಕಲಾದಗಿಯವರನ್ನು ಪಕ್ಷದಿಂದ ಉಚ್ಚಾಟಿಸಿ: ಒತ್ತಾಯ
ಗುಳೇದಗುಡ್ಡ18: ಬಿಜೆಪಿಯ ನೇಕಾರ ಪ್ರಕೊಷ್ಟ ಬಾಗಲಕೋಟ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕಲಾದಗಿ ಇವರನ್ನು ಪಕ್ಷದಿಂದ ಹಾಗೂ ಹುದ್ದೆಯಿಂದ ಉಚ್ಚಾಟಿಸಬೇಕೆಂದು ಇಲ್ಲಿಯ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಬಿಜೆಪಿ ನಗರ ಘಟಕದ ಅಧ್ಯಕ್ಷ ವಸಂತಸಾ ದೊಂಗಡೆ ಹಾಗೂ ಮಾಜಿ ಶಾಸಕ ರಾಜಶೇಖರ ಶೀಲವಂತ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ನೇಕಾರ ಪ್ರಕೊಷ್ಠ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕಲಾದಗಿ ಇವರು ಬಿಜೆಪಿ ಲೇಟರ್ ಹೆಡ್ ಬಳಿಸಿ ಜಿಲ್ಲಾ ನೇಕಾರರಿಗೆ ಅವಮಾನಿಸಿದ್ದರಿಂದ ನಮ್ಮ ಪಕ್ಷಕ್ಕೆ ಹಾನಿವುಂಟು ಮಾಡಿದ್ದಾರೆ ಮತ್ತು ನೇಕಾರರ ಬೆಳವಣಿಗೆಗೆ ಅಡ್ಡವಾಗಿದ್ದಾರೆ, ಇದರಿಂದ ಪಕ್ಷಕ್ಕೆ ಮುಜುಗರವಾಗಿದೆ. ನಮಗೆ ಮತ್ತು ನಮ್ಮ ನೇಕಾರರು ಜಿಲ್ಲೆಯಲ್ಲಿ ತಲೆ ಎತ್ತದಂತಾಗಿದೆ. ಇವರು ಈಗಾಗಲೇ ಜಮಖಂಡಿ ತಾಲೂಕಿನ ರಾಂಪೂರ ಪಟ್ಟಣದಲ್ಲಿ ಸೊಸಾಯಿಟಿಯಲ್ಲಿ ಅವ್ಯವಾಹಾರ ನಡೆಸಿ ಇಲ್ಲಿ ಬಂದಿದ್ದಾರೆ. ಕಾರ್ಯಕರ್ತರೊಂದಿಗೆ ಇವರ ವರ್ತನೆ ಸರಿ ಇಲ್ಲ. ಸಂಘಟನೆ ಕೂಡ ಮಾಡುತ್ತಿಲ್ಲ. ಕಾರಣ ಇವರನ್ನು ಪಕ್ಷದಿಂದ ಮತ್ತು ಪಕ್ಷ ಕೊಟ್ಟ ಹುದ್ದೆಯಿಂದ ಉಚ್ಚಾಟಿಸಬೇಕು. ಇಲ್ಲವಾದರೆ ಬಿಜೆಪಿಯ ಎಲ್ಲ ಕಾರ್ಯಕರ್ತರು ಸೇರಿ ಅವರ ವಿರುದ್ದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ನಗರ ಘಟಕದ ಮಾಜಿ ಉಪಾಧ್ಯಕ್ಷ ಗಂಗಾಧರ ಯಲಬುರ್ಗಿ ಹೇಳಿದರು.
ನಗರ ಘಟಕದ ಮಾಜಿ ಅಧ್ಯಕ್ಷ, ತಾಲೂಕಾ ಪ್ರಧಾನ ಕಾರ್ಯದರ್ಶಿ ಸಿದ್ದು ಅರಕಾಲಚಿಟ್ಟಿ, ಶರಣಪ್ಪ ದಿಂಡಿ, ಸಂಗಮೇಶ ಹುನಗುಂದ, ಮಹೇಶ ಸೂಳಿಭಾವಿ, ನೂರಂದಪ್ಪ ಮಳ್ಳಿ, ಪ್ರಕಾಶ ಹಿರೇಮನಿ, ಸಂಗಮೇಶ ರಂಜನಗಿ, ಶ್ರೀನಿವಾಸ ದಾನಿ, ಬಸವರಾಜ ದೊತರದ ಮುಂತಾದವರು ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ ಅವರಿಗೂ ಪತ್ರ ಬರೆದು ಒತ್ತಾಯಿಸಿದ್ದಾರೆ.