ಸದಸ್ಯರ ಸಹಕಾರದೊಂದಿಗೆ ಸಂಘದ ಕಾರ್ಯಕ್ಷೇತ್ರ ಪಕ್ಕದ ಜಿಲ್ಲೆಗಳಿಗೆ ವಿಸ್ತರಣೆ: ಭಮ್ಮಣ್ಣಾ ಚೌಗುಲೆ
ಶಿರಗುಪ್ಪಿ ಲಾಲಬಹಾದ್ದೂರ ಸಹಕಾರಿ ಸಭೆ
ಕಾಗವಾಡ 25: ಸಹಕಾರಿಯ ಎಲ್ಲ ಸದಸ್ಯರ, ಠೇವಣಿದಾರರ ಸಹಕಾರ ಮತ್ತು ಸಾಲಗಾರರು ಸರಿಯಾದ ವೇಳೆಗೆ ಸಾಲ ಮರು ಪಾವತಿಸಿ, ಸಹಕಾರಿಯ ಪ್ರಗತಿಗೆ ಸಾಥ ನೀಡುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 1 ಕೋಟಿ 60 ಲಕ್ಷ 75 ಸಾವಿರದಾ 604 ರೂ. ಗಳ ನಿವ್ಹಳ ಲಾಭ ಗಳಿಸಿದೆ. ಸಂಘದ ಕಾರ್ಯಕ್ಷೇತ್ರವನ್ನು ಬೆಳಗಾವಿ ಜಿಲ್ಲೆಯೊಂದಿಗೆ ವಿಜಯಪೂರ, ಬಾಗಲಕೋಟ, ಧಾರವಾಡ ಜಿಲ್ಲೆಗೆ ವಿಸ್ತರಿಸಲಾಗುವುದು ಎಂದು ಅಧ್ಯಕ್ಷ ಭಮ್ಮಣ್ಣಾ ಚೌಗಲಾ ತಿಳಿಸಿದ್ದಾರೆ.
ಅವರು, ಮಂಗಳವಾರ ದಿ. 24ರಂದು ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಅರಿಹಂತ ಶಾಲೆಯ ಸಭಾ ಭವನದಲ್ಲಿ ಜಿನ್ನಪ್ಪಣ್ಣಾ ಚೌಗುಲೆ ಲಾಲಬಹಾದ್ದೂರ ಕ್ರೆಡಿಟ್ ಸೌಹಾರ್ದ ಸಹಕಾರಿಯ 35 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮುಖ್ಯ ಕಾರ್ಯನಿರ್ವಾಹಕ ವಿದ್ಯಾಸಾಗರ ಚೌಗುಲೆ ಸಂಘದ ವರದಿ ವಾಚನ ಮಾಡುತ್ತ, ಸಂಘದಲ್ಲಿ ಒಟ್ಟು 3077 ಸದಸ್ಯರಿದ್ದು, 20 ಲಕ್ಷ 49 ಸಾವಿರ ಶೇರ್ ಬಂಡವಾಳ ಹೊಂದಿದೆ. ಇನ್ನೂ 104 ಕೋಟಿ 56 ಲಕ್ಷ 28 ಸಾವಿರದ 349 ರೂ. ಠೇವಣಿ ಸಂಗ್ರಹಿಸಿದ್ದು, 53 ಕೋಟಿ 84 ಲಕ್ಷ 46 ಸಾವಿರದಾ 753 ರೂ. ಗಳಷ್ಟು ಸಾಲ ವಿತರಿಸಲಾಗಿದೆ. ಸದಸ್ಯರಿಗೆ ಶೇ. 25 ರಷ್ಟು ಲಾಭಾಂಶ ವಿತರಿಸಲಾಗುವುದು ಎಂದರು.
ದೀಪ ಬೆಳಗುವ ಮೂಲಕ ಸಭೆಗೆ ಚಾಲನೆ ನೀಡಲಾಯಿತು. ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂತರ ಎಲ್ಲ ಗಣ್ಯರನ್ನು ಮಾಲಾರೆ್ಣ ಮಾಡಿ ಸ್ವಾಗತಿಸಲಾಯಿತು.
ಉಪಾಧ್ಯಕ್ಷೆ ಶಾಲನ ಪಾಟೀಲ, ಸಿಬಿಕೆಎಸ್ಎಸ್ ಕಾರ್ಖಾನೆಯ ನಿರ್ದೇಶಕ ಮಹಾವೀರ ಕಾತ್ರಾಳೆ, ಅನೀಲ ಚೌಗುಲೆ, ಜಿನ್ನಪ್ಪಾ ಬೋರಗಾಂವೆ, ರಾಜೇಂದ್ರ ಸಿದ್ಧಾಂತಿ, ಮಹಾವೀರ ತೇರದಾಳೆ, ಅಪ್ಪುಗೌಡಾ ಪಾಟೀಲ, ಅನೀಲ ಕುಡಚೆ, ಭರತ ನಾಂದ್ರೆ, ಜಿತೇಂದ್ರ ಸಾಂಗಲೆ, ಅಜೀತ ಮಗದುಮ್ಮ, ಪ್ರಭಾಕರ ದಂಡಾಪೂರೆ, ನಿರ್ದೇಶಕರಾದ ಭಾಹುಸಾಬ ಕುರುಂದವಾಡೆ, ತಾತ್ಯಾಸಾಬ ಚೌಗುಲೆ, ಸುರೇಶ ಚೌಗುಲೆ, ಮಹಾವೀರ ಅಕಿವಾಟೆ, ಶ್ರೀಮತಿ ವೀಣಾ ಕಾತ್ರಾಳೆ, ನೇಮಣ್ಣಾ ತೇರದಾಳೆ, ಅಪ್ಪಾಸಾಬ ಶಿರಗುಪ್ಪೆ, ಶಂಕರ ಸವದೆ, ಬಾಹುಬಲಿ ಭೋಲೆ, ಅಣ್ಣಾಸಾಬ ಚಂದೂರೆ, ಯಲ್ಲಪ್ಪಾ ಕಾಂಬಳೆ, ಮಹಾದೇವಿ ಪಾಟೀಲ ಸೇರಿದಂತೆ ಎಲ್ಲ ಶಾಖೆಗಳ ಸಲಹಾ ಸಮಿತಿಯ ಸದಸ್ಯರು, ಸಿಬ್ಬಂದಿ ವರ್ಗದವರು, ಸದಸ್ಯರು ಉಪಸ್ಥಿತರಿದ್ದರು. ಸುರೇಶ ಚೌಗುಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ನಿಖಿತಾ ಮಗದುಮ್ಮ ನಿರೂಪಿಸಿದರು. ಪ್ರಕಾಶ ಕುಂಬಾರ ವಂದಿಸಿದರು.