ಮಹಾತ್ಮಾ ಗಾಂಧೀಜಿಯವರ ಭಾವಚಿತ್ರ, ದಾಖಲೆಗಳ ಪ್ರದರ್ಶನ ಉದ್ಘಾಟನೆ
ಧಾರವಾಡ 28: ಜೆ.ಎಸ್.ಎಸ್. ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಹಾಗೂ ಧಾರವಾಡದ ಪ್ರಾದೇಶಿಕ ಪತ್ರಗಾರ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಗಳು ಮತ್ತು ದಾಖಲೆಗಳ ಪ್ರದರ್ಶನವನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ ಅವರು ಉದ್ಘಾಟಿಸಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಡಾ. ಮಂಜುಳಾ ಯಲಿಗಾರ, ಮಹಾವೀರ ಉಪಾಧ್ಯೆ, ಡಾ. ಆರ್.ವಿ.ಚಿಟಗುಪ್ಪಿ ಉಪಸ್ಥಿತರಿದ್ದರು.