ರಾಣೆಬೆನ್ನೂರ

ಜನರ ಗಮನ ಸೆಳೆದ ದಸರಾ ಗೊಂಬೆಗಳ ಪ್ರದರ್ಶನ

ಜನರ ಗಮನ ಸೆಳೆದ ದಸರಾ ಗೊಂಬೆಗಳ ಪ್ರದರ್ಶನ

ರಾಣೆಬೆನ್ನೂರು 06:  ನಾಡಹಬ್ಬ ದಸರೆ ನಾಡಿಗೆ ದೊಡ್ಡದು. ದಸರಾ ಮಹೋತ್ಸವದ ನಿಮಿತ್ತ, ಮನೆ.ಮನೆಗಳಲ್ಲಿ ನೂರಾರು ಬಗೆಯ, ಕಾರ್ಮಿಕ ಸಂಸ್ಕೃತಿಯ ಇತಿಹಾಸವುಳ್ಳ ಗೊಂಬೆಗಳನ್ನು ಪ್ರ ದರ್ಶಿಸುವ ಮೂಲಕ, ಸಂಭ್ರಮಿಸುವುದು ಸಮಗ್ರ ಭಾರತೀಯರ ಸಂಸ್ಕೃತಿ ಮತ್ತು ಸಂಸ್ಕಾರ ಪರಂಪರೆಯಾಗಿದೆ. ಮೈಸೂರಿನ ದಸರಾ ಉತ್ಸವವನ್ನು ನೆನಪಿಸುವ, ಮತ್ತು ಬಗೆಬಗೆಯ ವಿಶೇಷವಾದ ಗೊಂಬೆಗಳನ್ನು ಪ್ರದರ್ಶಿಸುವ ಮೂಲಕ, ರಾಜ.ರಾಜೇಶ್ವರಿ ನಗರದ, ಸಾಮಾಜಿಕ ಚಿಂತಕ, ಶಿವಣ್ಣ ಬಣಕಾರ್ ಅವರ ಕುಟುಂಬದವರು ನವರಾತ್ರಿ ನಿಮಿತ್ತ ಗೊಂಬೆಗಳ ಪ್ರದರ್ಶನ ಮಾಡಿ, ಸಾರ್ವಜನಿಕರ ಗಮನ ಸೆಳೆದರು. ನವರಾತ್ರಿಯ ಈ ಗೊಂಬೆಗಳನ್ನು ನೋಡಲೆಂದೇ ನಿತ್ಯವೂ ನೂರಾರು ಜನರು, ಧಾ ವಿಸಿ  ಬರುತ್ತಿರುವುದು ಸಾಮಾನ್ಯವಾಗಿತ್ತು. 


ಸುದ್ದಿ ಓದಿ