ರಾಣೆಬೆನ್ನೂರ

ಉತ್ತಮ ಆರೋಗ್ಯಕ್ಕಾಗಿ ದಿನನಿತ್ಯ ವ್ಯಾಯಾಮಾಡಿ: ಮಲ್ಲೇಶಪ್ಪ ಅರಕೇರಿ

ಉತ್ತಮ ಆರೋಗ್ಯಕ್ಕಾಗಿ ದಿನನಿತ್ಯ ವ್ಯಾಯಾಮಾಡಿ: ಮಲ್ಲೇಶಪ್ಪ ಅರಕೇರಿ

ರಾಣಿಬೆನ್ನೂರ:3 ಇಂದಿನ ಒತ್ತಡದ, ಯಾಂತ್ರೀಕೃತ ಜೀವನದಲ್ಲಿ ಶಾಂತಿ, ಸಹನೆ, ತಾಳ್ಮೆ, ಸಮಾಧಾನ ದೂರವಾಗಿ ಅರೋಗ್ಯ ಹದಗೆಡುವ ಸಂಭವವಿದೆ. ಉತ್ತಮ ಆರೋಗ್ಯಕ್ಕಾಗಿ ದಿನನಿತ್ಯ ವ್ಯಾಯಾಮ, ನಡಿಗೆ, ಅಧ್ಯಾತ್ಮ ದಂತಹ ಸತ್ಸಂಗ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಪ್ರಮಾನದಲ್ಲಿ ಪಾಲ್ಗೊಳ್ಳಬೇಕು ಎಂದು ವರ್ತಕ ಮಲ್ಲೇಶಪ್ಪ ಅರಕೇರಿ ಹೇಳಿದರು.   

ಮಂಗಳವಾರ ನಗರದ ದೊಡ್ಡಪೇಟೆ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸ್ವಾಭಿಮಾನಿ ಕರ್ನಾಟಕ  ರಕ್ಷಣಾ ವೇದಿಕೆ, ಬಸವೇಶ್ವರ ಸೇವಾ ಸಮಿತಿ, ಎನ್‌ಎಸ್ ಸ್ನೇಹ ಜ್ಯೋತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಕಂಪಾನಿಯೋ ದಾವಣಗೆರೆ ಇವರ ಸಹಯೋಗದೊಂದಿಗೆ ಏರಿ​‍್ಡಸಿದ್ದ 14 ದಿನಗಳ ಕಾಲದ ಉಚಿತ ಪೂಟ್ ಪಲ್ಸ್‌ ಥೆರಪಿ ಶಿಬಿರ ಉದ್ಘಾಟಿಸಿ ಮಾತನಾಡಿದರು. 

ಜು.2 ರಿಂದ ಜು.14ರವರೆಗೆ  ಪ್ರತಿದಿನ ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಈ ಶಿಬಿರವು ನಡೆಯಲಿದೆ. ಮಧುಮೇಹ, ಸಂಧಿವಾತ, ಸ್ನಾಯು ಸೆಳೆತ ಊತ, ಬೊಜ್ಜು, ನಿದ್ರಾಹೀನತೆ, ಪಾರ್ಶುವಾಯು, ಬೆನ್ನು ನೋವು, ರಕ್ತದೊತ್ತಡ ಸೇರಿದಂತೆ ಇತರ ಕಾಯಿಲೆಗಳಿಗೆ ಈ ಶಿಬಿರ ರಾಮಬಾಣವಾಗಿದೆ ಎಂದರು.      ಯಾವುದೇ ಅಡ್ಡ ಪರಿಣಾಮವಿಲ್ಲದೇ ರಕ್ತ ಪರಿಚಲನೆ ಮತ್ತು ನರಗಳ, ವಿವಿಧ ಸರಳ ಮತ್ತು ದೀರ್ಘಕಾಲೀನ  ಸಮಸ್ಯೆಗಳನ್ನು ಓಷಧಿ ರಹಿತವಾಗಿ ಈ ಪೂಟ್ ಪಲ್ಸ್‌ ಥೆರಫಿಯ ಮೂಲಕ ನಿವಾರಿಸಬಹುದಾಗಿದೆ. ನಾಗರೀಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.  

ಸ್ವಾಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮಿ, ಗೋಪಿ ಕುಂದಾಪುರ, ನಾಗರಾಜ್  ಹುಣಸೇವಾಡಿ, ಶೆಟ್ಟಿ,  ಪ್ರದೀಪ ಸೇರಿದಂತೆ ದೇವಸ್ಥಾನ ಸಮಿತಿ ಸದಸ್ಯರು ಇದ್ದರು. 


ಸುದ್ದಿ ಓದಿ