ವ್ಯಾಯಾಮ, ಯೋಗದಿಂದ ರೋಗಗಳು ದೂರ: ಹೊಳೆಪ್ಪನವರ
ಅಥಣಿ 03: ವ್ಯಾಯಾಮ ಮತ್ತು ಯೋಗ ಮಾಡುವದರಿಂದ ಹಲವಾರು ರೋಗ ರುಜಿನಗಳು ದೂರವಾಗಿ ಮನುಷ್ಯರು ಆರೋಗ್ಯವಾಗಿರುತ್ತಾರೆ. ನೆಹರು ಯುವ ಕೇಂದ್ರ ಬೆಳಗಾವಿಯವರು ಆಗಾಗ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವದು ತುಂಬಾ ಸಂತೋಷ ಎಂದು ಪತಂಜಲಿ ಯೋಗ ತರಬೇತಿ ಕೇಂದ್ರದ ಯೋಗ ತರಬೇತಿದಾರ ಎಸ್ ಕೆ ಹೊಳೆಪ್ಪನವರ ಹೇಳಿದರು.ಅಥಣಿ ನಗರದಲ್ಲಿ ಪತಂಜಲಿ ಯೋಗ ತರಬೇತಿ ಕೇಂದ್ರದಲ್ಲಿ ನೆಹರು ಯುವ ಕೇಂದ್ರ ಬೆಳಗಾವಿ ಹಾಗೂ ಮುರಸಿದ್ದೇಶ್ವರ ಕಲಾ ಪೋಷಕ ಸಂಘ ಮುರಗುಂಡಿ ಇವರ ಸಂಯುಕ್ತ ಆಶ್ರಯದಲ್ಲಿ ಅಥಣಿ ನಗರದ ಪತಂಜಲಿ ಯೋಗ ತರಬೇತಿ ಕೇಂದ್ರ ಬಸವನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಿಸೆನ್ ಲೈಫ್, ಪರಿಸಕ್ಕಾಗಿ ಜೀವನ ಶೈಲಿ, ಆರೋಗ್ಯ ಮತ್ತು ಸ್ವಾಸ್ಥ್ಯ ಪ್ರಚಾರ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆಯನ್ನು ಯನ್ನು ಹಿರಿಯ ಸಾಹಿತಿ ಅಪ್ಪಾಸಾಹೇಬ ಅಲಿಬಾದಿ, ಮುಖ್ಯ ಅತಿಥಿಗಳಾಗಿ ಕುಮಾರ ಗಸ್ತಿ, ಪರುಶುರಾಮ ಐಹೊಳೆ, ಪ್ರಕಾಶ ಪಠ್ಯಗೋಳ, ರಾಯಪ್ಪ ಪಾಸಾರಿ ಸುರೇಶ ವಾಘಮೋಡೆ ಆನಂದ ಮಗಾಡಿ, ಕುಮಾರ ಮುದಕಪ್ಪಾಗೋಳ, ರೇಖಾ ಪಾಟೀಲ್, ರಾವಸಾಬ ಐಹೊಳೆ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ನಾಡಗೀತೆ ಹಾಗೂ ಪ್ರಾರ್ಥನಾ ಗೀತೆಯನ್ನು ಬೆಳಗಾವಿಯ ಕರುನಾಡು ಗಾನ ಕೋಗಿಲೆ ವಿಜೇತೆ ಸ್ವಾತಿ ಉಮೇಶ ಕಿಡದಾಳ ಹಾಡಿದರು. ಭೀರೇಶ ವಾಘಮೋಡೆ ಸ್ವಾಗತಿಸಿದರು. ಅಶೋಕ ಮಗದುಮ್ಮ ವಂದಿಸಿದರು