ಇಂಡಿ

ಎಲ್ಲರೂ ಸಚ್ಛತೆಗೆ ಆದ್ಯತೆ ನೀಡಿ: ಅಂಬಲಗಿ

ಎಲ್ಲರೂ ಸಚ್ಛತೆಗೆ ಆದ್ಯತೆ ನೀಡಿ: ಅಂಬಲಗಿ

ಇಂಡಿ: ಊಟದ ಮೊದಲು ಕೈ ತೊಳೆದುಕ್ಕೊಳಬೇಕು. ಅಸ್ವಚ್ಛತೆ ಕಾರಣದಿಂದ ಅನೇಕರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಹೀಗಾಗಿ ಎಲ್ಲರೂ ಸಚ್ಛತೆಗೆ ಆದ್ಯತೆ ನೀಡಬೇಕು ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸುನಂದಾ ಅಂಬಲಗಿ ಹೇಳಿದರು. 

ಶನಿವಾರ ತಾಲೂಕಿನ ಭತಗುಣಕಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಕೈ ತೊಳೆಯುವ ದಿನಾಚರಣೆ ನಿಮಿತ್ಯ ಹಮ್ಮಿಕೊಂಡ ಕಾರ‌್ಯಕ್ರಮದಲ್ಲಿ ಅವರು ಮಾತನಾಡಿದರು. 

ಸಾರ್ವಜನಿಕ ಸ್ಥಳಗಳಲ್ಲಿರುವ ವಸ್ತುಗಳು ಮುಟ್ಟಿದಾಗ ಆಗಾಗ ಕಣ್ಣು, ಮೂಗು, ಬಾಯಿ ಸ್ಪರ್ಶಿಸುತ್ತದ್ದರೆ ಅಡುಗೆ ಮಾಡುವ ಮೊದಲು ಶೌಚಾಲಯಕ್ಕೆ ಹೋಗಿ ಬಂದ ನಂತರ, ಸೇಹಿತರಿಗೆ ಹ್ಯಾಂಡ ಶೇಖ ಕೊಟ್ಟ ಬಳಿಕ ಕೈ ತೋಳೆಯಬೇಕು. ಇಲ್ಲವಾದರೆ ವೈರಾಣು ಇರುವ ಕೈಗಳಿಂದ ಮೂಗು, ಬಾಯಿ ಮುಟ್ಟಿಕೊಳ್ಳುವುದರಿಂದ ಶೀತ, ಮನಂಜೆಟಿಸ್, ಹೆಪಟೈಟಸ್ ಮತ್ತು ಅತೀಸಾರದಂತಹ ತೀವ್ರತರವಾದ ಸೋಂಕು ಹರಡಬಹುದು ಜೊತೆಗೆ ಇತರರಿಗೂ ವೈರಾಣು ಹರಡಿಸುತ್ತದೆ. 

ಕೈಗಳು ತೊಳೆಯುವುದರಿಂದ ಶೇಕಡಾ 40 ರಷ್ಟು ಸಾಂಕ್ರಾಮಿಕ ಕಾಯಿಲೆಗಳನ್ನು ತಡೆಯಬಹುದು. ಶೇಕಡಾ 57 ರಷ್ಟು ಮನುಷ್ಯನ ಜಠರ ಕರುಳಿನ ಸಮಸ್ಯೆಯನ್ನು ತಡೆಯಬಹುದು. ಉಸಿರಾಟದ ಕಾಯಿಲೆ ಮತ್ತು ಸೋಕುಗಳ ಕಾಯಿಲೆ, ಸೋಂಕುಗಳನ್ನು 21 ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೈಗಳು ತೊಳೆಯುವುದರಿಂದ ಸೋಂಕು ಮತ್ತು ರೋಗಗಳನ್ನು ತಡೆಯಬಹುದು. ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಕೈ ತೋಳೆಯುವದು ಬಹಳ ಪ್ರಮುಖವಾಗಿದೆ ಎಂದರು. 

ಕೋವಿಡ್‌-19 ನಂತಹ ಸಾಂಕ್ರಾಮಿಕ ರೋಗಗಳು ಮತ್ತು ವೈರಸ್ಸಗಳ ವಿರುದ್ದ ಪ್ರತಿ ಸಾರಿ ಸೋಪುಹಾಕಿ ನೀರಿನಿಂದ ತೊಳೆಯುವದು ಉತ್ತಮ ಎಂದರು.        

ಕಾರ‌್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಎಸ್‌.ಪಿ.ಎಚ್‌.ಸಿ.ಓ. ಎಮ್‌.ಎಸ್‌. ಚವ್ಹಾಣ, ಎಚ್‌.ಆಯ್‌.ಓ ರೇಷ್ಮಾ ಉತ್ಸಾದ, ಸಿ.ಎಚ್‌.ಓ ಶಕ್ತಿಕುಮಾರ ಸೇರಿದಂತೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಮಹಿಳೆಯರು ಮತ್ತು ಮಕ್ಕಳು ಇದ್ದರು. 


ಸುದ್ದಿ ಓದಿ