ಹಬ್ಬಗಳ ಆಂತರಿಕ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕು : ದುರ್ಗಾದಾಸ
ಧಾರವಾಡ 12: ಕರ್ನಾಟಕ ವಿಶ್ವವಿದ್ಯಾಲಯವನ್ನು ಕಟ್ಟಿದವರು ಪಾವಟೆಯವರು. ನಂತರ ಅದನ್ನು ಬೆಳೆಸಿದವರಲ್ಲೊಬ್ಬರು ಡಾ.ಆರ್.ಸಿ ಹಿರೇಮಠ ಅವರು. ಅವರು ಸಂಶೋಧನೆಗೆ ಒಂದು ವಿವೇಕತೆ, ವಿನಯತೆ, ನಮ್ರತೆ, ತುಂಬಿದವರು. ಅವರ ಸಾಹಿತ್ಯ ಕೃಷಿ ಮಹಾವೃಕ್ಷವಾಗಿ ಬೆಳೆದು ನಿಂತಿದೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ಡಾ. ಕೆ ಆರ್ ದುರ್ಗಾದಾಸ ಹೇಳಿದರು.
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತ ವತಿಯಿಂದ ನಾಗರ ಪಂಚಮಿ ಹಬ್ಬದ ಅಂಗವಾಗಿ ಡಾ ಆರ್ ಸಿ ಹಿರೇಮಠ ದತ್ತಿ, ಹುಬ್ಬಳ್ಳಿಯ ಮೂರುಸಾವಿರಮಠ ದತ್ತಿ, ಗುರುಸಿದ್ದೇಶ್ವರ ಕೋ.ಅಫ್ ಬ್ಯಾಂಕ್ ಲಿ.ದತ್ತಿ ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾ ಭವನದಲ್ಲಿ ಏರಿ್ಡಸಿದ ಉಪನ್ಯಾಸ ಮತ್ತು ನಾಗರ ಪಂಚಮಿ ಹಬ್ಬದ ಹಾಡು ಹಾಗೂ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ
ಕಾರ್ಯಕ್ರಮದಲ್ಲಿ ಹಬ್ಬ ಹರಿದಿನಗಳು ವಿಷಯದ ಕುರಿತು ಸಾಯಿ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವೀಣಾ ಬಿರಾದಾರ ಉಪನ್ಯಾಸದಲ್ಲಿ ಮಾತನಾಡುತ್ತಾ 12 ತಿಂಗಳಲ್ಲಿ ಬರುವ ಹಬ್ಬಗಳ ಮಹತ್ವದ ಮತ್ತು ಅವುಗಳು ನಮ್ಮ ಸಂಬಂಧವನ್ನು ಗಟ್ಟಿಮಾಡುವ ವಿಧಾನಗಳ ಕುರಿತು ವಿವರವಾದ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷರಾದ ಡಾ ಲಿಂಗರಾಜ ಅಂಗಡಿ ವಹಿಸಿ ಮಾತನಾಡಿದರು.
ಸನ್ಮಾನಿತರ ಪರವಾಗಿ ಸವಿತಾ ಅಮರಶೆಟ್ಟಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ವೇದಿಕೆಯಲ್ಲಿ ಹುಬ್ಬಳ್ಳಿಯ ಸಿ ಬಿ ದಾರವಾಡಶೆಟ್ಟರ ಇದ್ದರು
ಈ ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಧಾರವಾಡ ಜಿಲ್ಲಾ ಘಟಕದ ಕಾರ್ಯಕಾರಿ ನೂತನ ಮಹಿಳಾ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಜಯಶ್ರೀ ಪಾಟೀಲ್, ಸವಿತಾ ಅಮರಶೆಟ್ಟಿ, ವಿಜಯಲಕ್ಷ್ಮೀ ಕಲ್ಯಾಣ ಶೆಟ್ಟರ್, ಸುವರ್ಣ ಬಿರಾದಾರ, ನಾಗರತ್ನ ಹಡಗಲಿ, ಸಂಧ್ಯಾ ಅಂಬಡಗಟ್ಟಿ, ಪಾರ್ವತಿ ಹಾಲಬಾವಿ, ಬಸಂತಿ ಹಪ್ಪಳದ, ಮುಕ್ತಾ ಸವಡಿ, ಸುಧಾ ಕಬ್ಬೂರ, ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಂತರ ವೀರಶೈವ ಮಹಿಳಾ ಜಾಗೃತಿ ಸಮಿತಿ, ಶ್ರೀರಾಮ ಜಯರಾಮ ಮಹಿಳಾ ತಂಡ, ವನಸಿರಿ ಮಹಿಳಾ ಮಂಡಳ ಟೀಮ್, ಸರಸ್ವತಿ ಜ್ಞಾನ ಮಹಿಳಾ ಮಂಡಳದ ನೇಹಾ ಬುದ್ನಿ, ಶಾರದಾ ಭಜನಾ ಮಂಡಳಿ, ಶ್ರೀ ಶಿವಕೀರ್ತಿ ಮಹಿಳಾ ಮಂಡಳ, ಅಕ್ಕನ ಬಳಗದವರಿಂದ ನಾಗರ ಪಂಚಮಿಯ ಕುರಿತು ಹಾಡುಗಳ ಕಾರ್ಯಕ್ರಮ ನಡೆಯಿತು.
ಶಿಕ್ಷಕಿ ಪ್ರಮೀಳಾ ಜಕ್ಕಣ್ಣವರ ನಿರೂಪಿಸಿದರು. ತಾಲೂಕಾ ಕಸಾಪ ಗೌರವ ಕಾರ್ಯದರ್ಶಿ ಮಾತಾಂರ್ಡಪ್ಪ ಕತ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗಾಯಕ ಪ್ರೇಮಾನಂದ ಶಿಂಧೆ ಪ್ರಾರ್ಥಿಸಿದರು. ಕಸಾಪ ಅಧ್ಯಕ್ಷ ಮಹಾಂತೇಶ ನರೇಗಲ್ಲ ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರೊ. ವಿ.ಸಿ ಸವಡಿ, ಶಾಂತವೀರ ಬೆಟಗೇರಿ, ಎಚ್ ಎಸ್ ಬಡಿಗೇರ, ಎಮ್ ಜಿ ಸುಬೇದಾರ, ಎಸ್ ಎಚ್ ಪ್ರತಾಪ್, ಸುನಂದಾ ಉಡಾಲ, ಗೀತಾ ಕುಲಕರ್ಣಿ ಮುಂತಾದವರು ಇದ್ದರು.