ಸಂವಿಧಾನಕ್ಕೆ ಎಲ್ಲರೂ ತಲೆಬಾಗಲೇಬೇಕು: ರಾಠೋಡ
ಲೋಕದರ್ಶನ ವರದಿ
ಇಂಡಿ 27: ಭಾರತೀಯರು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ, ನಮ್ಮ ಸಂವಿಧಾನ ಶಿಲ್ಪಿಗಳಾದ ಡಾ. ಬಿ.ಆರ್. ಅಂಬೇಡ್ಕರ್ ಅವರು ಸುಭದ್ರ ಆಡಳಿತ ನಿರ್ವಣೆಗಾಗಿ ಸಂವಿಧಾನವನ್ನು ದಯಪಾಲಿಸಿದರು ಅದ್ದರಿಂದ ಸಂವಿಧಾನಕ್ಕೆ ಎಲ್ಲರೂ ತಲೆಬಾಗಲೇಬೇಕು ಎಂದು ಶಾಲಾ ಮುಖ್ಯ ಗುರು ಆರ್.ಸಿ. ರಾಠೋಡ ಹೇಳಿದರು.
ಅವರು ಬುಧವಾರ ತಾಲೂಕಿನ ಹಿರೇಬೇವನೂರ ಗ್ರಾಮದ ಎಂ.ಪಿ.ಎಸ್. ಶಾಲೆಯಲ್ಲಿ 73ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
73 ವರ್ಷದ ಅವಧಿಯಲ್ಲಿ ಭಾರತವು ಹಲವು ಏರಿಳಿತ ಕಂಡಿದೆ. ಗುಲಾಮಗಿರಿಯಿಂದ ಹೊರಬಂದು ಎಲ್ಲ ರಾಷ್ಟ್ರಗಳಂತೆ ಭಾರತವು ಅನೇಕ ಸವಾಲುಗಳನ್ನು ಎದುರಿಸಿದೆ. ಇಂದು ಜಾಗತೀಕ ಮಟ್ಟದಲ್ಲಿ ಪ್ರಾಬಲ್ಯವನ್ನು ಮೆರೆಯುತ್ತಿದೆ ಎಂದರು.
ಶಿಕ್ಷಕಿ ಸರೋಜನಿ ಮಾವಿನ ಮರ ಮಾತನಾಡಿ. ಭಾರತ ಏಷ್ಯಾ ಖಂಡದ ಬಹುದೊಡ್ಡ ರಾಷ್ಟ್ರ. ಜಗತ್ತಿನ ಅತಿ ಬಲಿಷ್ಠ ಪ್ರಜಾಪ್ರಭುತ್ವ ದೇಶ. ಸಾಧಕರ ಕರ್ಮಭೂಮಿ. ಸಾಧು-ಸಂತರ ಪುಣ್ಯಭೂಮಿ. ಶಾಂತಿ ಸೌರ್ಹಾದತೆ ನೆಲೆಬೀಡು. ಏಕತೆ ಭಾರತದ ವೈಶಿಷ್ಟ್ಯ ಸರ್ವ ಜಾತಿ ಮತ ಧರ್ಮ ಪಂಥೀಯರು ಕೂಡಿಬಾಳುವ ಅಪರೂಪದ ನೆಲ. ನಾವೆಲ್ಲರೂ ಒಂದೇ ಮತ ಒಂದೇ ಧರ್ಮ ನಾವು ಮನುಜರು ಎಂಬುದು ವಿಶ್ವಕ್ಕೆ ಭಾರತಿಯರು ನೀಡಿರುವ ದಿವ್ಯ ಸಂದೇಶ ಎಂದರು.
ದ್ವಜಾರೋಣದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಮುತ್ತಪ್ಪ ಚಿಕ್ಕಬೇವನೂರ, ಪ್ರವೀಣ ಉಪ್ಪಿನ, ಶಿಕ್ಷಕರಾದ ಟಿ.ಆರ್. ಚವ್ಹಾಣ, ಎನ್.ಎಲ್. ಹಚಡದ, ಯು.ಬಿ. ಭಜಂತ್ರಿ, ಎಸ್.ಎಸ್. ನಿಪ್ಪಾಣಿ, ಎಸ್.ಆರ್. ಕಟ್ಟಿಮನಿ, ಎಸ್.ಎಲ್. ಖೇಡಗಿ, ಪಿ.ಎಸ್. ವಾಡಿ, ದಯಾನಂದ ರಾಠೋಡ, ಬಿ.ಎಸ್. ಭಾಸಗಿ, ಎಸ್.ಎಸ್. ಅಂದೇವಾಡಿ, ಎಸ್.ಜಿ. ಹಿರೇಮಠ, ಎ.ಬಿ. ಹೂಗಾರ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.