ಹೂವಿನ ಹಡಗಲಿ

ಪ್ರತಿಯೊಬ್ಬರೂ ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಿರಿ: ಗಿರಿ ವಾಲ್ಮೀಕಿ

ಪ್ರತಿಯೊಬ್ಬರೂ ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಿರಿ:  ಗಿರಿ ವಾಲ್ಮೀಕಿ

ಹೂವಿನ ಹಡಗಲಿ31:  ಮುಂದಿನ ಪೀಳಿಗೆಗೂ ಪರಿಸರ ಉಳಿಸುವ ಕೆಲಸ ಕಾಲೇಜು ವಿದ್ಯಾರ್ಥಿಗಳಿಂದ ಆಗಬೇಕು ಎಂದು ಅರಣ್ಯ ಮೌಲ್ಯಮಾಪಕ ಗಿರಿ ವಾಲ್ಮೀಕಿ ಅಭಿಪ್ರಾಯ ಪಟ್ಟರು. ತಾಲೂಕಿನ ಹೊಳಲು ಸ್ವಾಮಿ ವಿವೇಕಾನಂದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಯುವಜನತೆಯಲ್ಲಿ ಕರ್ನಾಟಕದ ಪರಿಸರ ಪ್ರಜ್ಞೆ ಕುರಿತ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.  

ಪರಿಸರ ಎಂದರೆ ಕೇವಲ ಗಿಡ ಮರಗಳಲ್ಲ, ನಮ್ಮ ಬದುಕಿನ ಪ್ರತಿ ಕ್ಷಣದಲ್ಲೂ ನಾವು ಪರಿಸರದ ಮೇಲೆ ಅವಲಂಬಿತರಾಗಿದ್ದೇವೆ. ಎಲ್ಲೋ ಮಾಡುವ ಗಣಿಗಾರಿಕೆ ಇನ್ನೆಲ್ಲೋ ನೀರಿನ ಅಭಾವ ಉಂಟು ಮಾಡುತ್ತದೆ. ಪ್ರತಿ ದಿನಕ್ಕೂ ಬಿಸಿಲು ಏರುವುದು, ಹವಾಮಾನ ವೈಪರೀತ್ಯವಾಗುವುದು, ನೀರು ಕಲುಷಿತವಾಗುವುದು ಎಲ್ಲವೂ ಮನುಷ್ಯನ ಮೇಲೆ ಪರಿಣಾಮ ಬೀರಿ ಕೊನೆಗೆ ಮನುಷ್ಯನ ನಾಶಕ್ಕೆ ಕಾರಣವಾಗುತ್ತದೆ ಎಂದರು. ಹಿರಿಯರು ಉಳಿಸಿದ ಪರಿಸರದಿಂದ ನಾವು ಉಸಿರಾಡುತ್ತಿದ್ದೇವೆ. ಮಕ್ಕಳು ಉಸಿರಾಡಬೇಕೆಂದರೆ ನಾವು ಅವರಿಗೆ ಪರಿಸರ ಉಳಿಸಿಕೊಡಬೇಕು ಎಂದು ಹೇಳಿದರು. ಕರ್ನಾಟಕದ ವಿವಿಧ ಕಾಡುಗಳು, ಪ್ರಾಣಿ ಸಂಕುಲ, ಸಸ್ಯ ಸಂಕುಲ ಹಾಗೂ ಜೀವವೈವಿಧ್ಯತೆಯ ಬಗ್ಗೆ ಚಿತ್ರ ಸಹಿತ ಮಾಹಿತಿ ನೀಡಿದರು.  ಉಪನ್ಯಾಸಕರಾದ ಪರಶುರಾಮ ನಾಗೋಜಿ, ಸಣ್ಣನೀಲಪ್ಪ, ಮಲ್ಲಯ್ಯ, ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ