‘ಸಂವಿಧಾನದಲ್ಲಿನ ಕಾನೂನುಗಳನ್ನು ಪ್ರತಿಯೊಬ್ಬರು ಅರಿತು ಪಾಲಿಸಿ’
ಕಾಗವಾಡ 27: ಕಾಗವಾಡ ವಕಿಲರ ಸಂಘದ ವತಿಯಿಂದ ಶುಕ್ರವಾರ ಸಂಜೆ ಕಾಗವಾಡದ ನ್ಯಾಯಾಲಯದ ಆವರಣದಲ್ಲಿ ಸಂವಿಧಾನ ದಿನ ಕಾರ್ಯಕ್ರಮ ಕಾಗವಾಡ ಸಿವಿಲ್ ನ್ಯಾಯಾಧೀಶ ಚನ್ನಬಸಪ್ಪ ಕೋಡಿಯುವರ್ ಅಧ್ಯಕ್ಷತೆಯಲ್ಲಿ ನೆರವೇರಿತು.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ನ್ಯಾಯಾಧೀಶ ಚನ್ನಬಸಪ್ಪ ಕೂಡಿ ಹಾಗೂ ತಸಿಲ್ದಾರ್ ರಾಜೇಶ ಬುರ್ಲಿ, ಸಿಪಿಐ ಶಂಕರಗೌಡ ಪಾಟೀಲ್ ಸೇರಿದಂತೆ ನ್ಯಾಯವಾದಿಗಳು ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನ್ಯಾಯಾಧೀಶರಾದ ಚನ್ನಬಸಪ್ಪ ಕೋಡಿ ಮಾತನಾಡುವಾಗ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ನಮ್ಮ ದೇಶದ ಸಂವಿಧಾನ ಅಂಗೀಕಾರವಾದ ದಿನ ಈ ದಿನದಂದು ದೇಶಾದ್ಯಂತ ಸಂವಿಧಾನ ದಿನ ಆಚರಿಸುತ್ತಿದ್ದಾರೆ. ಸಂವಿಧಾನದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಪ್ರತಿಯೊಬ್ಬರಿಗೆ ನ್ಯಾಯ ಒದಗಿಸಬೇಕು ಇದು ಕೇವಲ ನ್ಯಾಯಾಲಯದಿಂದ ಅಷ್ಟೆಅಲ್ಲ ಪ್ರತಿಯೊಂದು ಕ್ಷೇತ್ರದಲ್ಲಿ ಅವರಿಗೆ ನ್ಯಾಯ ಒದಗಿಸುವ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಅಥಣಿ ಸಿಪಿಐ ಶಂಕರಗೌಡ ಪಾಟೀಲ್ ಮಾತನಾಡುವಾಗ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಹಗಲಿರುಳು ಶ್ರಮಿಸಿ ರಚಿಸಿದ ಸಂವಿಧಾನದಲ್ಲಿರುವ ಕಾನೂನುಗಳು ಪ್ರತಿಯೊಬ್ಬರು ಅರಿತು ಪಾಲನೆ ಮಾಡಬೇಕು. ಕಟ್ಟು ಕಡೆಯಲ್ಲಿರುವ ಪ್ರತಿಯೊಬ್ಬರಿಗೆ ನ್ಯಾಯ ದೊರಕಿದರೆ ಮತ್ತು ಎಲ್ಲ ಕ್ಷೇತ್ರದಲ್ಲಿ ನೀಡಿದರೆ, ಈ ಸಂವಿಧಾನ ರಚಿಸಿದ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಬೆಳಗಾವಿ ಹಿರಿಯ ನ್ಯಾಯವಾದಿ ಎಂ.ಎಚ್.ನಂದಗಾವ್ ಇವರು ವಕಿಲರ ನೈತಿಕತೆ ಮತ್ತು ನಡುವಳಿಕೆ ಹಾಗೂ ಅಥಣಿ ನ್ಯಾಯವಾದಿಗಳಾದ ಎಸ್.ಎ.ಸಂಖ ಇವರು ಭಾರತಿಯ ಸಂವಿಧಾನ ಮತ್ತು ಕಾನುನ ದಿನಾಚರನೆ ಬಗೆ ಉಪನ್ಯಾಸ ನೀಡಿದರು. ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಸಂವಿಧಾನ ಪೀಠಿಕೆ ಬೋಧಿಸಿದರು. ಉಭಯ ನ್ಯಾಯವಾದಿಗಳು ಕಾಗವಾಡ ವಕಿಲರ ಸಂಘಕ್ಕೆ ತಲಾ 30 ಸಾವಿರ ದೇಣಿಗೆ ನೀಡಿದರು.
ಕಾಗವಾಡ ಪಬ್ಲಿಕ್ ಪ್ರಾಸಿಕ್ಯೂಟರ್ ಶಾಂತಕುಮಾರ್ ಖೆಮಲಾಪುರೆ, ಸಿಡಿಪಿಓ ಸಂಜುಕುಮಾರ ಸದಲ್ಗೆ, ತಾಲೂಕ ಪಂಚಾಯಿತಿ ಅಧಿಕಾರಿ ವೀರನಗೌಡ ಎಗನಗೌಡರ, ಪಿ.ಎಸ್.ಐ. ಬಿ,ಎಂ. ರಬಕವಿ, ಹೆಸ್ಕಾಂ ಇಲಾಖೆ ಅಧಿಕಾರಿ ವೃಷಭ ಗಣೇ, ಹಿರಿಯ ನ್ಯಾಯವಾದಿಗಳಾದ ಅಭಯಕುಮಾರ ಅಕಿವಾಟೆ, ಎಸ್.ಬಿ ಪಾಟೀಲ್, ಎಸ್.ಡಿ.ನರವಾಡೆ, ನ್ಯಾಯವಾದಿ ಸಂಘಟನೆಯ ಉಪಾಧ್ಯಕ್ಷ ಎ.ಬಿ.ಭಂಡಾರೆ ಕಾರ್ಯದರ್ಶಿ ಎ.ಬಿ ದೀಕ್ಷಾಂತ, ಬಿ.ಎಸ್,ಸಿದನಾಳೆ, ಸಿ.ಎಸ್.ಮಠಪತಿ, ಆರ.ಎಚ.ಸಾಲಿಮನಿ, ಜೆ.ಡಿ ಕುರಂದವಾಡ, ಪಿ.ಎಸ್.ಕನಾಳ, ಎಂ.ಎಸ್.ಪಾಟೀಲ್, ಎಸ್.ಎಸ್.ಪಾಟೀಲ್ ರಾಹುಲ ಕಟೀಗೆರಿ, ಸಿ.ಎ.ಅಂಬೋಳಿ, ಮನೋಜ ವಡ್ಡರ, ಉದಯ ಉಪ್ಪಾರ, ಸೇರಿದಂತೆ ಅನೇಕರಿದ್ದರು.