ಬೈಲಹೊಂಗಲ

ಪ್ರತಿಯೊಬ್ಬರು ಸಾಮಾಜಿಕ ಕಳಕಳಿಯಿಂದ ಕಾರ್ಯನಿರ್ವಹಿಸಿ: ಪ್ರಭು ನೀಲಕಂಠಶ್ರೀ

ಪ್ರತಿಯೊಬ್ಬರು ಸಾಮಾಜಿಕ ಕಳಕಳಿಯಿಂದ ಕಾರ್ಯನಿರ್ವಹಿಸಿ: ಪ್ರಭು ನೀಲಕಂಠಶ್ರೀ

ಬೈಲಹೊಂಗಲ 08:  ಪ್ರತಿಯೊಬ್ಬರು ಸಾಮಾಜಿಕ ಕಳಕಳಿಯಿಂದ ಕಾರ್ಯನಿರ್ವಹಿಸಬೇಕು. ಉಳ್ಳವರು ಇಲ್ಲದವರಿಗೆ ಅಗತ್ಯವಿರುವ ವಸ್ತುಗಳನ್ನು ಕೊಡುಗೆ ನೀಡಿದಾಗ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ ಎಂದು ಶಾಖಾ ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮಿಜಿ ಹೇಳಿದರು. 

ಅವರು ಪಟ್ಟಣದ ವಿಜಯ ಸೋಶಿಯಲ್ ಕ್ಲಬನಲ್ಲಿ ಸಾಮಾಜಿಕ ಕಾರ್ಯಕರ್ತ  ಸುಭಾಸ ತುರಮರಿ ಹುಟ್ಟು ಹಬ್ಬದ ನಿಮಿತ್ತ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ವಿಶಾಲ  ಜಗತ್ತಿನಲ್ಲಿ ಜನರ ಮನಸ್ಸು ಸಂಕೀರ್ಣವಾಗುತ್ತಿದ್ದು , ಸ್ವಾರ್ಥಪರ ಚಿಂತನೆಗಳು ಹೆಚ್ಚುತ್ತಿವೆ. ಸಮಾಜದಲ್ಲಿ ಯುವ ಪೀಳಿಗೆ ಇಂತಹ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಮಾಜಿಕ ಕಾಳಜಿ  ಮೂಡಿಸುವದಕ್ಕೆ ಮುಂದಾಗಬೇಕು ಎಂದರು.  

ಮಾಜಿ ಶಾಸಕ ಜಗದೀಶ್ ಮೆಟಗುಡ ಮಾತನಾಡಿ, ಸುಭಾಸ ಅವರು ಒಂದು ವ್ಯಕ್ತಿ ಅಲ್ಲ ಅವರು ನಮ್ಮ ಬೈಲಹೊಂಗಲದ ಶಕ್ತಿ, ಅವರ ಸಾಮಾಜಿಕ ಕಳಕಳಿ,ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಹಾಯಹಸ್ತ,ಇನ್ನೂ ಸಾಮಾಜಿಕ  ಕಾರ್ಯಗಳನ್ನು ನಮ್ಮೊಂದಿಗೆ ಮಾಡುತ್ತಾ ಬಂದಿದ್ದು ಅವರ ಸರಳ ಗುಣಕ್ಕೆ ಸಾಕ್ಷಿ ಎಂದರು. 

ಉದ್ಯಮಿ ವಿಜಯ ಮೆಟಗುಡ, ಜಿಲ್ಲಾ ಬಿಜೆಪಿ ಮಾದ್ಯಮ ವಕ್ತಾರ ಎಪ್ ಎಸ್‌.ಸಿದ್ದನಗೌಡರ,  ಪುರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ, ಕಲಾವಿದ ಸಿ ಕೆ ಮೆಕ್ಕೆದ,  ಅವರ ಸೇವೆ  ನಿರಂತರ ಆಗಿ ಬಡ ಜನರ ಬಾಳಿಗೆ ಬೆಳಕಾಗಲಿ, ಯುವ ಜನತೆ ಮೈಗೂಡಿಸಿಕೊಳ್ಳಲಿ  ಎಂದರು. 

ಭಗಳಂಬದೇವಿ ದೇವಸ್ಥಾನದ ಧರ್ಮದರ್ಶಿ ಡಾ.ವೀರಯ್ಯ ಹಿರೇಮಠ,  ಜಗದೀಶ ಬೂದಿಹಾಳ, ಸಂತೋಷ ಹಡಪದ, ಸುನೀಲ ಮರಕುಂಬಿ,ಮಹಾದೇವಪ್ಪ ನರಸಣ್ಣವರ,ವಿವೇಕ ಬೇವಿನಕೊಪ್ಪ,ಮಲ್ಲಿಕಾರ್ಜುನ ಬೇವಿನಕೊಪ್ಪ,ಮಹಾಂತೇಶ ಇಂಚಲ,ಮಹಾಂತೇಶ ಹೊಸಮನಿ,ಮೋಹನ ವಕ್ಕುಂದ, ಅನೇಕರು ಇದ್ದರು. 


ಸುದ್ದಿ ಓದಿ