ಶಿಗ್ಗಾವ್

ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ: ನ್ಯಾ. ಪರೋಜಾ

ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ: ನ್ಯಾ. ಪರೋಜಾ

ಲೋಕದರ್ಶನ ವರದಿ 

ಶಿಗ್ಗಾವಿ 08: ದೈನಂದಿನ ವ್ಯವಹಾರಿಕ ಬದುಕಿನಲ್ಲಿ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ. ಈ ನಿಟ್ಟಿನಲ್ಲಿ ಕಳೆದ ಒಂದು ದಶಕದಿಂದ ಕಾನೂನು ಪ್ರಾಧಿಕಾರ ಆಯಾ ಸ್ಥಳೀಯ ವಕೀಲ ಸಂಘದ ಸಹಯೋಗದೊಂದಿಗೆ ಕಾನೂನು ಸಾಕ್ಷರತಾ ಅಭಿಯಾನ ನಡೆಸುತ್ತಾ ಬಂದಿದೆ ಎಂದು ಪಟ್ಟಣದ ಜೆ.ಎಂ.ಎಫ್‌.ಸಿ ನ್ಯಾಯಾಲಯದ ಹಿರಿಯ ದಿವಾಣಿ ನ್ಯಾಯಾಧೀಶೆ ಪರೋಜಾ ಉಕ್ಕಲಿ ಹೇಳಿದರು. 

    ತಾಲೂಕಿನ ಅಂದಲಗಿ ಗ್ರಾಮ ಪಂಚಾಯತಿಯಲ್ಲಿ ಇತ್ತೀಚಿಗೆ ತಾಲೂಕು ಕಾನೂನು ಸೇವೆಗಳ ಸಮಿತಿ ಶಿಗ್ಗಾವಿ ಹಾಗೂ ತಾಲೂಕ ವಕೀಲರ ಸಂಘ ಸಂಯುಕ್ತಾಶ್ರಯದಲ್ಲಿ ಕೋಣನಕೇರಿ ಪಂಚಾಯತಿ ಹಾಗೂ ಅಂದಲಗಿ ಗ್ರಾಮ ಪಂಚಾಯತಿಯ ಸಹಯೋಗದಲ್ಲಿ ನಡೆದ ಕಾನೂನು ಸಾಕ್ಷರತಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕಾನೂನು ಅರಿವಿಲ್ಲದೇ ಅಪರಾಧ ಎಸಗಿದರೂ ನ್ಯಾಯಾಲಯಗಳಲ್ಲಿ ಅದಕ್ಕೆ ಕ್ಷಮೆ ಇರುವುದಿಲ್ಲ. ಮತ್ತೊಂದೆಡೆ ವ್ಯವಹಾರಿಕ ಬದುಕಿನಲ್ಲಿ ಕಾನೂನಿನ ಬಗ್ಗೆ ಅರಿವಿಲ್ಲದವರು ಮೋಸ ಹಾಗೂ ವಂಚನೆಗೆ ಒಳಗಾಗುವ ಪ್ರಕರಣಗಳು ಹೆಚ್ಚಿವೆ. ಎಲ್ಲಿವರೆಗೆ ಅರಿವಿನ ಕೊರತೆ ಇರುವವರು ಇರುತ್ತಾರೋ ಅವರನ್ನೇ ಗುರಿಯಾಗಿಸಿಕೊಂಡು ಕಾನೂನು ವ್ಯಾಪ್ತಿಯಲ್ಲಿ ಮೋಸಗೊಳಿಸುವವರು ಇರುತ್ತಾರೆ ಎಂದರು. 

      ಕಿರಿಯ ದಿವಾಣಿ ನ್ಯಾಯಾಧೀಶೆ ನರ್ಷತ್ತ್‌ ಖಾನ ಕಾನೂನು ಹಾಗೂ ಅದರ ಅರಿವು. ಸರ್ಕಾರದ ಯೋಜನೆಗಳಡಿ ಫಲಾನುಭವಿಗಳಾಗುವ ಬಗ್ಗೆ ಅರಿವು ಮೂಡಿಸಿದರು. 

       ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ನ್ಯಾಯವಾದಿ ಎಂ.ಎಚ್‌. ಬೆಂಡಿಗೇರಿ, ಎಫ್‌.ಎಸ್ ಕೋಣನವರ, ಕೆ.ಎನ್‌. ಭಾರತಿ, ಕಾನೂನು ಅರಿವು ಕುರಿತು ಉಪನ್ಯಾಸ ನೀಡಿದರು. ನ್ಯಾಯವಾದಿ ಎಸ್‌.ಕೆ. ಅಕ್ಕಿ, ಎಫ್‌.ಎಸ್‌. ಹುಡೇದ, ಎಸ್‌.ಎನ್ ಪಾಟೀಲ, ಕೋಣನಕೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ಹನುಮವ್ವ ದೇವಗಿರಿ,  ವಿನೋದಾ ಕರಗುದರಿ, ಸದಸ್ಯರಾದ ರತ್ನವ್ವ ಓಲೇಕಾರ, ಶೇಖಪ್ಪ ಜವಳಿ, ವೀರಬದ್ರಗೌಡ ಪಾಟೀಲ, ಜಾಫರಸಾಬ ಯಡಹಳ್ಳಿ, ಮಾಜಿ ತಾಪಂ ಸದಸ್ಯ ಬಿ.ಎಸ್‌.ಹಿರೇಮಠ, ಚನ್ನವೀರಯ್ಯಾ ಹಿರೇಮಠ, ಶಿವಪುತ್ರ​‍್ಪ ಜವಳಿ, ಸುಭಾಸ್‌ರಾವ್ ದೇಶಪಾಂಡೆ, ಅಂದಲಗಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ