ಯರಗಟ್ಟಿ

ಪ್ರತಿಯೊಬ್ಬ ಶಿಕ್ಷಕರು ಪ್ರೀತಿ, ನಿಷ್ಠೆಯಿಂದ ಬೋಧನೆ ಮಾಡಿ: ಕರಿಕಟ್ಟಿ

ಪ್ರತಿಯೊಬ್ಬ ಶಿಕ್ಷಕರು ಪ್ರೀತಿ, ನಿಷ್ಠೆಯಿಂದ ಬೋಧನೆ ಮಾಡಿ: ಕರಿಕಟ್ಟಿ

ಯರಗಟ್ಟಿ 05:ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸಂಸ್ಕಾರ, ನೀತಿಪಾಠ ಹಾಗೂ ತತ್ವಾದರ್ಶಗಳನ್ನು ನೀಡಿ ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಿ ದೇಶದ ಆಸ್ತಿಯಾಗಿ ನಿರ್ಮಾಣ ಮಾಡುವ ಮಹತ್ತರವಾದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿಹೇಳಿದರು. 

ಅವರು ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಜಿತಕುಮಾರ ದೇಸಾಯಿ ಅಭಿಮಾನಿ ಬಳಗ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಅಭಿನಂದನಾಕಾರ್ಯಕ್ರಮ ಉದ್ದೇಶಿಸಿಮಾತನಾಡಿದರು. ಎಲ್ಲ ವೃತ್ತಿಗಳಲ್ಲಿ ಅತ್ಯಂತ ಪವಿತ್ರ ಮತ್ತು ಶ್ರೇಷ್ಠವಾದ ಶಿಕ್ಷಕ ವೃತ್ತಿಗೆ ಸಮಾಜದಲ್ಲಿ ಬಹಳಷ್ಟು ಗೌರವ ಇದೆ.ಆದ್ದರಿಂದ ಪ್ರತಿಯೊಬ್ಬ ಶಿಕ್ಷಕರು ಗುರುವಿನ ಸ್ಥಾನವನ್ನು ಪ್ರೀತಿಯಿಂದ ನಿಷ್ಠೆಯಿಂದ ಒಪ್ಪಿಕೊಂಡು ಮಾಡಬೇಕು ಎಂದರು.  

ನಂತರ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಅಜೀತಕುಮಾರ ದೇಸಾಯಿ ಅವರು ಮಾತನಾಡಿ ಶಿಕ್ಷಕರ ದಿನವು ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ಮಹತ್ವದ ದಿನವಾಗಿದೆ. ಈ ದಿನವನ್ನು ಸೆಪ್ಟೆಂಬರ್ 5ರಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದಂದು ಆಚರಿಸಲಾಗುತ್ತದೆ. ಅವರು ಸ್ವತಃ ಮಹಾನ್ ಖ್ಯಾತಿಯ ಶಿಕ್ಷಕರಾಗಿದ್ದರು ಮತ್ತು ಭಾರತದ ಎರಡನೇ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ್ದರು. ವಿದ್ಯಾರ್ಥಿಗಳನ್ನು ಭವಿಷ್ಯದ ಆಧಾರ ಸ್ತಂಭಗಳೆಂದು ಪರಿಗಣಿಸಲಾಗುತ್ತದೆ. ನಂತರ ಶಿಕ್ಷಕರು ಆ ಸ್ತಂಭಗಳನ್ನು ಸಕಾರಾತ್ಮಕ ರೀತಿಯಲ್ಲಿ ನಿರ್ಮಿಸುವವರು. ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರೆ​‍್ಣಯ ಮೂಲಕ ನೀವು ನಮ್ಮ ಜೀವನವನ್ನು ಸುಂದರ ರೀತಿಯಲ್ಲಿ ರೂಪಿಸುತ್ತೀರಿ. ನಿಮ್ಮ ಜೀವನದುದ್ದಕ್ಕೂ ನೀವು ನಮಗಾಗಿ ಮಾಡಿದ್ದಕ್ಕಾಗಿ ನಾವು ಎಷ್ಟು ಕೃತಜ್ಞರಾಗಿರುತ್ತೇವೆ ಎಂಬುದನ್ನು ತೋರಿಸಲು ಈ ದಿನವನ್ನು ಆಚರಿಸಲು ಸಂತೋಷಪಡುತ್ತೇವೆ ಎಂದು ಹೇಳಿದರು.ಯರಗಟ್ಟಿ ತಾಲೂಕಿನ ಎಲ್ಲ ಶಿಕ್ಷಕ, ಶಿಕ್ಷಕಿಯರಿಗೆ ಗೌರವ ಸನ್ಮಾನ ಮಾಡಲಾಯಿತು. ಅಲ್ಲದೇ ವಿವಿಧ ಸ್ಪರ್ಧೆಗಳನ್ನು ಏರಿ​‍್ಡಸಲಾಗಿತ್ತು. ಭಾಗವಹಿಸಿದ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅಜೀತಕುಮಾರ ದೇಸಾಯಿ, ತಾಪಂ ಮಾಜಿ ಅಧ್ಯಕ್ಷ ವಿನಯಕುಮಾರ ದೇಸಾಯಿ, ಎಸ್‌ಡಿಎಂಸಿ ಅಧ್ಯಕ್ಷೆ ಸೃಷ್ಠಿ ಪಟ್ಟಣಶೆಟ್ಟಿ ಪಪಂ ಸದಸ್ಯರಾದ ಮಹಾಂತೇಶ ಜಕಾತಿ, ವಿಶಾಲಗೌಡ ಪಾಟೀಲ, ಟಿಎಪಿಎಂಸಿ ಅಧ್ಯಕ್ಷ ವೆಂಕಟೇಶ ದೇವರಡ್ಡಿ, ಎ.ಕೆ. ಜಮಾದಾರ, ಟಿ. ಎಂ. ಕಾಮನ್ನವರ, ಡಾ. ರಾಜಶೇಖರ ಬಿರಾದಾರ, ಆರ್‌.ಎಲ್ ಜುಗನವರ, ಮನೋಹರ ಚಿಲದ, ಎ.ಎ.ಮಕ್ತುಮನ್ನವರ, ಎಸ್‌. ಬಿ. ಮಿಕಲಿ, ವಸತಿ ನಿಲಯದ ಮೇಲ್ವಿಚಾರಕರಾದ ಆಶಾ ಪರೀಟ, ಜ್ಯೋತಿ ಪಾಟೀಲ ಆಯ್‌. ಎನ್‌. ರೇವಡಿ, ಸುಂದರ ಸತ್ತಿಗೇರಿ, ಲಕ್ಷ್ಮೀ ಕಳ್ಳಿಗುದ್ದಿ ಇತರರು ಇದ್ದರು. 


ಸುದ್ದಿ ಓದಿ