ಇಂಡಿ

ಪ್ರತ್ಯೇಕ ನಿಗಮ ಸ್ಥಾಪನೆ : ಸಿಹಿಹಂಚಿ-ಸಂಭ್ರಮಾಚರಣೆ

ಪ್ರತ್ಯೇಕ ನಿಗಮ ಸ್ಥಾಪನೆ : ಸಿಹಿಹಂಚಿ-ಸಂಭ್ರಮಾಚರಣೆ
ಹೂಗಾರ ಮಾದಯ್ಯನವರ ವೃತ್ತದಲ್ಲಿ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಿದ ಪ್ರಯುಕ್ತ ಸಿಹಿಹಂಚಿ-ಸಂಭ್ರಮಾಚರಣೆ ಮಾಡಿದರು

ಇಂಡಿ: ಹೂಗಾರ, ಮಾಳಿ, ಮಾಲಗಾರ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ಘೋಷಿಸಿದ ಪ್ರಯುಕ್ತ ಹೂಗಾರ ಸಮಾಜ ಬಾಂಧವರು ಹಾಗೂ ಬಿಜೆಪಿ ಕಾರ್ಯಕರ್ತರು ಬುಧವಾರ ಹೂಗಾರ ಮಾದಯ್ಯನವರ ವೃತ್ತದಲ್ಲಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ಸರ್ವ ಸಮಾಜದ ಹಿತ ಕಾಯುತ್ತಿದೆ ಬಡ ವರ್ಗ ಹಾಗೂ ಹಿಂದುಳಿದ ವರ್ಗಗಳನ್ನು ಗುರುತಿಸಿ ಅವರನ್ನು ಮೇಲೆತ್ತುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಹೂಗಾರ ಸಮಾಜ ಮಾಳಿ ಸಮಾಜ ಸೇರಿದಂತೆ ಗಾಣಿಗ ಸಮಾಜ ಗಳಿಗೆ ಪ್ರತ್ಯೇಕ ನಿಗಮ ಮಂಡಳಿ ಘೋಷಣೆ ಮಾಡಿ ಸಮಾಜದಲ್ಲಿ ಹಿಂದುಳಿದವರನ್ನು ಮೇಲೆತ್ತುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.

ಮುಖಂಡರಾದ ಬಾಳು ಮುಳಜಿ, ಮಹೇಶ ಹೂಗಾರ, ಗುರುಬಾಳಪ್ಪ ಹೂಗಾರ, ವಿರೂಪಾಕ್ಷಿ ಹೂಗಾರ, ಮಹಾಂಥೇಶ ಹೂಗಾರ, ಅಮಿತ್ ಹೂಗಾರ, ಶಾಂತು ಹೂಗಾರ, ಮಂಜು ಹೂಗಾರ, ರವಿ ಹೂಗಾರ, ರಾಘವೇಂದ್ರ ಹೂಗಾರ, ರವಿ ಹೂಗಾರ ಸೇರಿದಂತೆ ಇನ್ನಿತರರು ಇದ್ದರು.


ಸುದ್ದಿ ಓದಿ