ಹೂವಿನ ಹಡಗಲಿ

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ: ಶಿಕ್ಷಕರ ಕಾರ್ಯಾಗಾರ

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ: ಶಿಕ್ಷಕರ ಕಾರ್ಯಾಗಾರ

ಹೂವಿನನರ ಹಡಗಲಿ 28: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ವಿನೂತನ ಮಾದರಿಯಿಂದ ನಡೆಯಲಿದೆ. ಶಿಕ್ಷಕರು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎ ಕೋಟೆಪ್ಪ ಹೇಳಿದರು.  

ತಾಲೂಕಿನ ನಾಗತಿ ಬಸಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಶಾಲಾ ಸಾಕ್ಷರತಾ ಶಿಕ್ಷಣ ಇಲಾಖೆ, ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸಮಾಜ ಹಿಂದಿ ವಿಷಯ ಶಿಕ್ಷಕರ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ವಿಷಯ ಶಿಕ್ಷಕರ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  

ಎಸ್ಸೆಸ್ಸೆಲ್ಸಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು. ಗೈರು ಹಾಜರಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರಲು ಎಲ್ಲ ಶಿಕ್ಷಕರು ಪ್ರಯತ್ನಿಸಬೇಕು. ಕಾರ್ಯಾಗಾರದ ಸದುಪಯೋಗಪಡಿಸಿಕೊಳ್ಳಬೇಕು. ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ಜೊತೆ ಚರ್ಚಿಸಿ ಗೊಂದಲ ಪರಿಹರಿಸಿಕೊಳ್ಳಿ ಒಟ್ಟಾರೆ ಫಲಿತಾಂಶ ಸುಧಾರಿಸಬೇಕು. ಎಂದರು.  

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ ಹನುಮಂತಪ್ಪ ಮಾತನಾಡಿ ಮಗುವಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾರ್ಗ ದರ್ಶನ ಮಾಡಬೇಕುಎಂದರು.  

ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಎಂ ಶಿವಲಿಂಗಪ್ಪ ನಿರ್ದೇಶಕ ಹೆಚ್ ಕಾಂತೇಶ ಇ ಸಿ ಓ ಮಲ್ಲಿಕಾರ್ಜುನ, ಹಿಂದಿ ಶಿಕ್ಷಕರ ವೇದಿಕೆ ಅಧ್ಯಕ್ಷ ಎಲ್ ಖಾದರ್ ಭಾಷಾ, ಸಮಾಜ ವಿಜ್ಞಾನ ಶಿಕ್ಷಕರ ವೇದಿಕಯ ಬನ್ನೆಪ್ಪ  ಸಂಪನ್ಮೂಲ ವ್ಯಕ್ತಿಗಳಾಗಿ ಮಹಾದೇವಪ್ಪ ಕುಂದರಗಿ  ಭಾಗವಹಿಸಿದ್ದರು. ಮುಖ್ಯ ಗುರುಗಳಾದ ಸಯ್ಯದ್ ಮುಬಿನಾ ಅಧ್ಯಕ್ಷತೆ ವಹಿಸಿದ್ದರು. ಸಂತೋಷ್ ಕುಮಾರ್,ಅನ್ನದಾನಿ ಸ್ವಾಮಿ ನಿರ್ವಹಿಸಿದರು. 


ಸುದ್ದಿ ಓದಿ