ಮಕ್ಕಳಿಗೆ ಸುರಕ್ಷತೆಗೆ ಅಗತ್ಯ ಕ್ರಮ: ಎಸ್.ಎಸ್. ಪಾಟೀಲ
ಲೋಕದರ್ಶನ ವರದಿ
ಅಥಣಿ 10: ತಾಲೂಕಿನ ದೇಸಾರಟ್ಟಿ ಗ್ರಾಮದ ಅಂಗನವಾಡಿ ಶಾಲೆಗಳು ಪುನಾರಂಭಗೊಂಡಿದ್ದು, ಶಾಲಾ ಪುಟಾಣಿ ಮಕ್ಕಳಿಗೆ ಶಿಕ್ಷಕಿಯರು ಹೂವು ನೀಡಿ, ಅದ್ದೂರಿ ಸ್ವಾಗತ ಕೋರಿದರು.
ಕೊರೊನಾದಿಂದ-19 ತಿಂಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಅಂಗನವಾಡಿ ಶಾಲೆಗಳು, ಬಳಿಕ ಪುನಾರಂಭ ಹಿನ್ನೆಲೆ ಶಾಲೆಯಲ್ಲಿ ಚಿಣ್ಣರ ಚಿಲಿ-ಪಿಲಿ ಕಲರವ ಮೂಡಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮೇಲ್ವಿಚಾರಕಿರಾದ ಎಸ್ ಎಸ್ ಪಾಟೀಲ್ ಮಾತನಾಡಿ, ಪಾಲಕರ ಒಪ್ಪಿಗೆ ಪತ್ರದೊಂದಿಗೆ ಮಕ್ಕಳು ಅಂಗನವಾಡಿ ಶಾಲೆಗೆ ಕರೆತಲಾಗಿದೆ. ಈಗಾಗಲೇ ಶಾಲೆಗಳಲ್ಲಿ ಮುಂಜಾಗ್ರತೆ ಕೈಗೊಳ್ಳಲಾಗಿದೆ. ಮಕ್ಕಳಿಗೆ ಸುರಕ್ಷತಾಯೊಂದಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಪುಟಾಣಿ ಮಕ್ಕಳಿಗಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಿಕೊಳ್ಳಾಗಿದೆ. ಈಗ ಸದ್ಯ ಅಂಗನವಾಡಿ ಬೆಳ್ಳಗೆ 10ರಿಂದ ಮಧ್ಯಾಹ್ನ 12 ಘಂಟೆವರೆಗೆ ನಡೆಸಲಾಗುವುದು ಎಂದು ತಿಳಿಸಿದರು.
ಅಂಗನವಾಡಿ ಕೇಂದ್ರದ ಕಾರ್ಯಕತೆಯಾದ ಶೋಭಾ ಎಸ್ ಕಾಂಬಳೆ ಅವರು ಹೂ ಮತ್ತು ಚಾಕಲೇಟ್ ನೀಡಿ ಮಕ್ಕಳನ್ನು ಸ್ವಾಗತ ಮಾಡಿಕೊಂಡರು ಈ ವೇಳೆ ಎಲ್ಲಾ ತಾಯಂದಿರು ಅತಿಥಿಗಳು ಉಪಸ್ಥಿತರಿದ್ದರು.